ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಜು.22- ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ಸೈನಿಕರಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದರೂ ಗಡಿಯಲ್ಲಿ ಪಾಕ್ ಪುಂಡಾಟ ನಡೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ರಜೋರಿ ಜಿಲ್ಲೆಯ ಸುಂದರ್‍ಬನಿ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನಿ ರೇಂಜರ್‍ಗಳು ಇಂದು ಬೆಳಗ್ಗೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದರು. ಭಾರತೀಯ ಯೋಧರು ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದರು.

ಇದರಿಂದ ಕೆಲ ಕಾಲ ಗುಂಡಿನ ಚಕಮಕಿ ನಡೆಯಿತು.ಕಳೆದ ಮೂರು ದಿನಗಳಲ್ಲಿ ಇದು ಪಾಕಿಸ್ತಾನ ನಡೆಸುತ್ತಿರುವ ಎರಡನೆ ಅಪ್ರಚೋದಿತ ದಾಳಿಯಾಗಿದೆ. ಶನಿವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕಾರ್ಗಿಲ್ ಪ್ರದೇಶಕ್ಕೆ ಭೇಟಿ ನೀಡುವುದಕ್ಕೆ ಮುನ್ನ ಪೂಂಚ್ ಜಿಲ್ಲೆಯ ಮಂದಾರ್ ವಲಯದಲ್ಲಿ ಪಾಕಿಸ್ತಾನಿ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಕೆಲ ಗ್ರಾಮಸ್ಥರಿಗೆ ಗಾಯಗಳಾಗಿದ್ದವು.

Facebook Comments