ನೀರಿನ ತೊಟ್ಟಿಯಲ್ಲಿ ಮೂರು ಪಂಚಲೋಹ ವಿಗ್ರಹಗಳ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಯಂಬತ್ತೂರು, ಫೆ.22 (ಪಿಟಿಐ)- ಇಲ್ಲಿನ ಐತಿಹಾಸಿಕ ಪತ್ತೀಶ್ವರರ್ ದೇವಾಲಯದ ನೀರಿನ ತೊಟ್ಟಿಯಲ್ಲಿ ಮೂರು ಪಂಚಲೋಹ ವಿಗ್ರಹಗಳನ್ನು ದೊರೆತಿದ್ದು, ದೇವಾಲಯ ಸಮಿತಿ ಅವುಗಳನ್ನು ಸೋಮವಾರ ವಶಕ್ಕೆ ತೆಗೆದುಪಡೆದುಕೊಂಡಿದೆ. ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರ ಕಣ್ಣಿಗೆ ಬಾವಿಯ ಪಕ್ಕದ ತೊಟ್ಟಿಯಲ್ಲಿ ವಿಗ್ರಹಗಳು ಬಿದ್ದಿರುವುದು ಕಂಡುಬಂದಿದೆ. ಗಮನಿಸಿದ ಅವರು ತಕ್ಷಣ ದೇವಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಎರಡರಿಂದ ಮೂರು ಅಡಿ ಎತ್ತರರ ವಿಷ್ಣು ಮೂರ್ತಿಯ ವಿವಿಧ ರೂಪಗಳ ವಿಗ್ರಹಗಳು ಇವಾಗಿವೆ. ಈ ವಿಗ್ರಹ ದೇವಸ್ಥಾನಕ್ಕೆ ಸೇರಿದ್ದವೇ ಅಥವಾ ಯಾರಾದರೂ ದುಷ್ಕರ್ಮಿಗಳು ಬೇರೆ ದೇವಾಲಯಗಳಿಂದ ಕದ್ದು ತಂದು ನಂತರ ತೆಗೆದುಕೊಂಡು ಹೋಗಲು ಇಲ್ಲಿ ಬಿಟ್ಟುಹೋಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments