ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುತ್ರನಿಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.2- ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಮತ್ತು ಗೌತಮ ಬುದ್ಧ ನಗರ ಶಾಸಕ ಪಂಕಜ್ ಸಿಂಗ್ಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ಪಾಸಿಟಿವ್ ವರದಿ ಬಂದಿದೆ ಎಂದು ಪಂಕಜ್ ಸಿಂಗ್ ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ.

ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಿನ್ನೆ ತಡರಾತ್ರಿ ಮನವಿ ಮಾಡಿಕೊಂಡಿದ್ದಾರೆ. ಇವರು ಇತ್ತೀಚೆಗೆ ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಇದಕ್ಕೂ ಮೊದಲು ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ಗೂ ಕೊರೊನಾ ದೃಢಪಟ್ಟಿತ್ತು. ಉತ್ತರಪ್ರದೇಶದ ಇಬ್ಬರು ಪ್ರಮುಖ ಶಾಸಕರು, ತಾಂತ್ರಿಕ ಶಿಕ್ಷಣ ಸಚಿವ ಕಮಲ್‍ರಾಣಿ ವರುಣ್ ಮತ್ತು ಸೈನಿಕ್ ವೆಲ್ಫೇರ್, ಹೋಮ್‍ಗಾರ್ಡ್, ಪಿಆರ್‍ಡಿ ಮತ್ತು ನಾಗರಿಕ ಭದ್ರತಾ ಖಾತೆಗಳನ್ನು ನಿರ್ವಹಿಸುತ್ತಿದ್ದ ಚೇತನ್ ಚೌವ್ಹಾಣ್ ಅವರೂ ಕೋವಿಡ್‍ಗೆ ತುತ್ತಾಗಿದ್ದಾರೆ.

Facebook Comments