AIADMK ಬೈಲಾಗೆ ತಿದ್ದುಪಡಿ : ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಸ್ಥಾನ ಭದ್ರ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಡಿ.1- ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಬೈಲಾಗಳಿಗೆ ತಿದ್ದುಪುಡಿ ತಂದಿದ್ದು ಪ್ರಸಕ್ತ ನಾಯಕತ್ವ ಉಳಿಸಿಕೊಳ್ಳಲು ಮಾನದಂಡಗಳನ್ನು ಮತ್ತಷ್ಟು ಬಲಗೊಳಿಸಿದೆ ಮತ್ತು ಪರಿಣಾಮಕಾರಿಯಾಗಿ ವಿ.ಕೆ.ಶಶಿಕಲಾ ಅವರ ಪಾಲಿಗೆ ಪಕ್ಷದ ಬಾಗಿಲನ್ನು ಬಂದ್ ಮಾಡಿದೆ.

ಬೈಲಾಗೆ ತಿದ್ದುಪಡಿ ತರುವ ಮೂಲಕ ಪಕ್ಷದ ಇಬ್ಬರು ಉನ್ನತ ನಾಯಕರಾದ ಓ. ಪನ್ನೀರ್ ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಲಾಗಿದೆ.

ಬೈಲಾಗೆ ತಿದ್ದುಪಡಿ ತಂದು ಸಂಚಾಲಕ ಮತ್ತು ಜಂಟಿ ಸಂಚಾಲಕ ಈ ಎರಡು ಉನ್ನತ ಸ್ಥಾನಗಳಿಗೆ ಆಯ್ಕೆ ಮಾಡಲು ಪ್ರಾಥಮಿಕ ಸದಸ್ಯರಿಂದ ಏಕ ಮತದಾನವನ್ನು ಕಡ್ಡಾಯಗೊಳಿಸಲಾಗಿದೆ.

Facebook Comments