ನೇತಾಜಿ ಜನ್ಮ ದಿನವನ್ನು ‘ಪರಾಕ್ರಮ ದಿವಸ್’ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.19- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನು ಪರಾಕ್ರಮಣ ದಿವಸವನ್ನಾಗಿ ಆಚರಿಸಲು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ಜ.23 ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಜನ್ಮ ದಿನವಾಗಿದೆ. ಈ ವರ್ಷ ಅವರ 125ನೇ ಜನ್ಮ ದಿನಾಚರಣೆಯಾಗಿದ್ದು, ಈ ಸಂದರ್ಭದಲ್ಲಿ ವರ್ಷಪೂರ್ತಿ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ನೇತಾಜಿಯವರ ಶೌರ್ಯ ಪರಾಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.

ಡಿಸೆಂಬರ್‍ನಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪರಾಕ್ರಮಣ್‍ದಿವಸ್ ಆಚರಣೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಜ.23ರ ನೇತಾಜಿ ಹುಟ್ಟುಹಬ್ಬ ಪರಾಕ್ರಮಣ್‍ದಿವಸ್ ಆಗಿ ಆಚರಣೆಗೊಳ್ಳಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದು, ಭಾರತ ನೇತಾಜಿಯವರ ಶೌರ್ಯ, ಪರಾಮಕ್ರಗಳ ಬಗ್ಗೆ ಸದಾ ಹೆಮ್ಮೆಪಡುತ್ತದೆ.

ಪ್ರತಿಯೊಬ್ಬ ಭಾರತೀಯರು ಘನತೆಯಿಂದ ಬದುಕಬೇಕೆಂಬುದು ನೇತಾಜಿಯವರ ಮಹದಾಸೆಯಾಗಿತ್ತು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಹೋರಾಟ ಅವಿಸ್ಮರಣೀಯ. ಅವರನ್ನು ನೆನಪಿಸಿಕೊಳ್ಳುವುದು ಭಾರತೀಯರ ಕರ್ತವ್ಯ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಮ್ಮ ಸರ್ಕಾರ ನೇತಾಜಿಯವರಿಗೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಂಪು ಕೋಟೆಯಲ್ಲಿ ನೇತಾಜಿಯವರ ಕುರಿತು ಮ್ಯೂಜಿಯಂ ಸ್ಥಾಪನೆ ಮಾಡಲಾಗಿದೆ. ಈಗ ಪರಾಕ್ರಮಣ್‍ದಿವಸ್ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Facebook Comments