ನಮ್ಮ ವ್ಯವಹಾರಕ್ಕೂ, ಮೃತ ರಮೇಶ್‍ಗೂ ಯಾವುದೇ ಸಂಬಂಧವಿಲ್ಲ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.13- ನಮ್ಮ ವ್ಯವಹಾರಕ್ಕೂ , ಮೃತಪಟ್ಟ ರಮೇಶ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಿಎ ರಮೇಶ್‍ರವರ ಅಂತ್ಯಕ್ರಿಯೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವ್ಯವಹಾರಕ್ಕೂ ರಮೇಶ್‍ಗೂ ಯಾವುದೇ ಸಂಬಂಧವಿಲ್ಲ.

ರಮೇಶ್ ನನ್ನ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಒಬ್ಬ ಆಪ್ತ ಸಹಾಯಕ ನಮ್ಮ ವ್ಯವಹಾರಗಳನ್ನು ನೋಡಿಕೊಳ್ಳಲು ಸಾದ್ಯವೇ ಎಂದು ಅವರು ಪ್ರಶ್ನಿಸಿದರು.  ರಮೇಶ್ ಸಾವಿನಿಂದ ತುಂಬಾ ನೋವಾಗಿದೆ.

ಅವರ ಕೆಲಸವನ್ನು ಅಚ್ಚುಕಟ್ಟಾಗಿ ತಮ್ಮ ಕೆಸಲವೆಷ್ಟೋ ಅಷ್ಟು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗುತ್ತಿದ್ದರು. ಕೆಲ ಮಾಧ್ಯಮಗಳಲ್ಲಿ ನಮ್ಮ ವ್ಯವಹಾರವನ್ನೆಲ್ಲ ರಮೇಶ್ ನೋಡಿಕೊಳ್ಳುತ್ತಿದ್ದರು ಎಂದು ಬಿಂಬಿಸಲಾಗಿದೆ. ಇದು ಸತ್ಯಕ್ಕೆ ದೂರವಾದ ವಿಷಯ. ಇದು ನಂಬಲೂ ಸಾಧ್ಯವೇ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

Facebook Comments