ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಕೇಂದ್ರ ಏಕೆ ಅನುಮತಿ ಕೊಡುತ್ತಿಲ್ಲ..?: ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ,ಜ.10- ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ಏಕೆ ಅನುಮತಿ ಕೊಡುತ್ತಿಲ್ಲ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಪ್ರಶ್ನಿಸಿದ್ದಾರೆ. ಮೇಕೆದಾಟು ನೀರಿನ ಲಭ್ಯತೆಯ ತಾಂತ್ರಿಕ ವಿಷಯಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಿವೆ. ಹೀಗಿರುವಾಗ ಆಣೆಕಟ್ಟು ಕಟ್ಟಿ ಎಂದು ಹೇಳಬೇಕಿತ್ತು.ಆದರೆ, ಕೇಂದ್ರ ಸರ್ಕಾರ ಹೇಳುತ್ತಿಲ್ಲ,ರಾಜ್ಯ ಸರ್ಕಾರಕ್ಕೆ ಬಾಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಕಾಲದಲ್ಲಿ ಅನಿವಾರ್ಯವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಬೇಕಿದ್ದರೆ ಇವರು ನಮ್ಮನ್ನು ಬಂಧಿಸಲಿ. ಬೆಂಗಳೂರು ಹಾಗೂ ಕಾವೇರಿ ಪಾತ್ರದ ಜನ ಮುಂದೇನು ಮಾಡಬೇಕು ಅಂತ ನಿರ್ಧಾರ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಮೇಕೆದಾಟು ಯೋಜನೆಗೆ ಅಡ್ಡಿಯಾದರೆ ಅದಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರೇ ಹೊಣೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ. ಮೇಕೆದಾಟು ಯೋಜನೆ ಸೂಕ್ಷ ್ಮ ವಿಷಯ. ಬೆಳಗಾಗುವುದರಲ್ಲಿ ಇತ್ಯರ್ಥ ಮಾಡಲು ಸಾಧ್ಯವಿಲ್ಲ.

ಕಾನೂನು ತೊಡಕುಗಳನ್ನು ಪರಿಹರಿಸಿ ಮುಂದುವರಿಯಬೇಕು. ರಾಜ್ಯ ಸರ್ಕಾರ ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎಂದಿದ್ದಾರೆ. ಆದರೆ, ಕಾಂಗ್ರೆಸ್ ನವರು ದುಡುಕಿನ ಹೆಜ್ಜೆ ಇಟ್ಟು ತೊಂದರೆ ಮಾಡುತ್ತಿದ್ದಾರೆಯೇ ಎಂದು ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments