ಏ.7ಕ್ಕೆ ವಿದ್ಯಾರ್ಥಿಗಳೊಂದಿಗೆ ಮೋದಿ ‘ಪರೀಕ್ಷಾ ಪೇ ಚರ್ಚಾ’

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.4-ಬರುವ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸ ಮಾದರಿಯ ಪರೀಕ್ಷಾ ಪೇ ಚರ್ಚಾ ಏ.7 ರಂದು ನಡೆಸುತ್ತಿದ್ದೇನೆ ಎಂದು ಸ್ವತಃ ಮೋದಿ ಅವರೇ ಇಂದು ಘೋಷಣೆ ಮಾಡಿದ್ದಾರೆ.

ಏ.7ರಂದು ಮಕ್ಕಳು ಪರೀಕ್ಷೆ ಬರೆಯುವ ಕುರಿತಂತೆ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಇಂಟರೆಸ್ಟಿಂಗ್ ಪ್ರಶ್ನಾವಳಿ ಹಾಗೂ ವಿಷಯದ ಮೇಲೆ ಸ್ಮರಣೀಯ ಚರ್ಚೆ ನಡೆಸುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಕೊರೊನಾ ಸೋಂಕು ಇಡಿ ದೇಶವನ್ನು ಕಾಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿಗಳು ಪರೀಕ್ಷ ಪೇ ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಕಳೆದ ಪೆಬ್ರವರಿಯಲ್ಲಿ ಘೋಷಣೆ ಮಾಡಲಾಗಿತ್ತು.

ಕಳೆದ 2018ರಲ್ಲಿ ಮೋದಿ ಅವರು ತಾಲ್‍ಕಟೋರ ಕ್ರೀಡಾಂಗಣದಲ್ಲಿ ಮೊದಲ ಹಂತದ ಪರೀಕ್ಷಾ ಪೇ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Facebook Comments