ಜ.20ರಂದು ‘ಪರೀಕ್ಷಾ ಪೆ ಚರ್ಚಾ’ದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.16- ಪರೀಕ್ಷೆ ಸಂದರ್ಭದಲ್ಲಿ ಭಯ, ಆತಂಕಕ್ಕೆ ಒಳಗಾಗದೆ ಸಮರ್ಥವಾಗಿ ಎದುರಿಸಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಮೂರನೇ ವರ್ಷದ ಪರೀಕ್ಷಾ ಪೆ ಚರ್ಚೆ ಕಾರ್ಯಕ್ರಮ ಜ.20(ಸೋಮವಾರ) ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ನಡೆಯಲಿದೆ.

ಇಂದು ನಡೆಯಬೇಕಿದ್ದ ಪರೀಕ್ಷಾ ಪೆ ಚರ್ಚೆ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಜ.20ಕ್ಕೆ ಮುಂದೂಡಲಾಗಿದೆ. 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ನಡೆಸುವ ಪರೀಕ್ಷಾ ಪೆ ಚರ್ಚಾ ಸಂವಾದ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿದೆ.

ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪರೀಕ್ಷಾ ಸಿದ್ದತೆ ಕುರಿತು ಮೋದಿ ಕೆಲವು ಮಹತ್ವದ ಸಲಹೆಸೂಚನೆ, ಮಾರ್ಗದರ್ಶನ ನೀಡಲಿದ್ದಾರೆ.ಈ ಬಾರಿ ಕೆಲವು ವಿದೇಶಗಳ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಭಾಗವಹಿಸುತ್ತಿರುವುದು ವಿಶೇಷ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರಲ್ಲಿ ಭಾಗವಹಿಸಿ ಪ್ರಧಾನಿಯವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯಲು ಅವಕಾಶ ನೀಡಲಾಗಿದೆ.

ಪ್ರಧಾನಿ ಮೋದಿ ಕಳೆದ ಪರೀಕ್ಷಾ ಪೆ ಚರ್ಚೆ ಆವೃತ್ತಿಯಲ್ಲಿ ಪರೀಕ್ಷಾ ಸಿದ್ದತೆಗಳು, ಒತ್ತಡಮುಕ್ತವಾಗಿ ಪರೀಕ್ಷೆ ಬರೆಯುವ ಕ್ರಮ ಮತ್ತು ಪಾಲಕರು ಅನುಸರಿಸಬೇಕಾದ ಕೆಲವು ಸಂಗತಿಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದರು.  ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಮೈಗೌರ್ಮೆಂಟ್ ಜಂಟಿಯಾಗಿ ಪ್ರಧಾನಿ-ವಿದ್ಯಾಥಿಗಳ ಮುಖಾಮುಖಿ ಸಂವಾದವನ್ನು ಆಯೋಜಿಸಿದೆ.

Facebook Comments