ಸಂಸತ್ ಅಧಿವೇಶನ ಆರಂಭ : ಪ್ರಧಾನಿ, ಕೇಂದ್ರ ಸಚಿವರು ಸೇರಿ ನೂತರ ಸದಸ್ಯರ ಪ್ರಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.17(ಪಿಟಿಐ)-ಹದಿನೇಳನೆ ಲೋಕಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಸಂಸತ್ ಅಧಿವೇಶದ ಮೊದಲ ದಿನವಾದ ಇಂದು ಸಭಾ ನಾಯಕ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.

ಸದನ ಇಂದು ಸಮಾವೇಶಗೊಳ್ಳುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ಸದಸ್ಯರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿರು.  ನಂತರ ಸದನದ ಮಹಾ ಪ್ರಧಾನಕಾರ್ಯದರ್ಶಿ ನರೇಂದ್ರ ಮೋದಿ ಅವರ ಹೆಸರನ್ನು ಕರೆದರು.

ಮೋದಿ ಅವರ ಪ್ರಮಾಣ ವಚನ ಸ್ವೀಕರಿಸಲು ಬರುತ್ತಿದ್ದಂತೆ ಎನ್‍ಡಿಎ ಸದಸ್ಯರು ಮೋದಿ ಮೋದಿ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು. ನಂತರ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಹರ್ಷವರ್ಧನ್, ಶ್ರೀಪಾದ್ ನಾಯಕ್, ಅಶ್ವಿನಿ ಚೌಬೆ ಮೊದಲಾದವರು ಪ್ರಮಾಣ ವಚನ ಸ್ವೀಕರಿಸಿದರು.

ಹಂಗಾಮಿ ಸ್ಪೀಕರ್ ಆಗಿ ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಿದ ವೀರೇಂದ್ರ ಕುಮಾರ್ ಸಂಸತ್‍ನಲ್ಲಿ ಇಂದು ಮತ್ತು ನಾಳೆ ನೂತನ ಸದಸ್ಯರ ಪ್ರಮಾಣ ವಚನಗಳ ಕಲಾಪದ ಉಸ್ತುವಾರಿ ನೋಡಿಕೊಳ್ಳಲಿದ್ಧಾರೆ.

Facebook Comments