ಐಫೆಲ್ ಟವರ್‌ನ ಮೂಲ ಮೆಟ್ಟಿಲುಗಳ ಒಂದು ಭಾಗ ಹರಾಜು

ಈ ಸುದ್ದಿಯನ್ನು ಶೇರ್ ಮಾಡಿ

Eiffel Towerಪ್ಯಾರಿಸ್ ಐಫೆಲ್ ಟವರ್ ಮಾನವ ನಿರ್ಮಿತ ಅದ್ಭುತ ಗೋಪುರಗಳಲ್ಲಿ ಒಂದು. ಜಗತ್ತಿನ ಅಚ್ಚರಿಗಳ ಪಟ್ಟಿಯಲ್ಲಿ ಈ ಗೋಪುರ ಸಹ ಸ್ಥಾನ ಪಡೆದಿದೆ. ಈಗ ಐಫೆಲ್ ಟವರ್‌ನ ಮೂಲ ಮೆಟ್ಟಿಲುಗಳ ಒಂದು ಭಾಗವನ್ನು ಹರಾಜು ಹಾಕಲಾಗುತ್ತಿದೆ. ಮುಂದಿನ ತಿಂಗಳು ಹರಾಜು ಆಗುವ ಇದರ ಅಂದಾಜು ಮಲ್ಯ ಎಷ್ಟು ಗೊತ್ತಾ..?

ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲಿರುವ ಜಗದ್ವಿಖ್ಯಾತ ಐಫೆಲ್ ಟವರ್‌ನ ಪ್ರಾಚೀನ ವೃತ್ತಾಕಾರದ ಮೆಟ್ಟಿಲುಗಳ ಒಂದು ಭಾಗವನ್ನು ಹರಾಜಿಗೆ ಇಡಲಾಗಿದೆ. 1889ರಲ್ಲಿ ನಿರ್ಮಾಣವಾದ ಈ ಸ್ಪೈರಲ್ ಸ್ಟೇರ್‍ಕೇಸ್ 5,75,000 ಡಾಲರ್‍ಗಳಿಗೆ ಹರಾಜಗುವ ನಿರೀಕ್ಷೆ ಇದೆ ಎಂದು ಅರ್ಟಿಕ್ಯೂರಿಯಲ್ ಆ್ಯಕ್ಷನ್ ಹೌಸ್ ಹೇಳಿದೆ. ಐಫೆಲ್ ಟವರ್‌ನ ಎರಡು ಮತ್ತು ಮೂರನೇ ಮಹಡಿಗಳಿಂದ ಮೂಲ ಮೆಟ್ಟಿಲು ಗಳನ್ನು ತಲುಪಲು ಹಾಕಲಾಗಿದ್ದ ಪಾವಟಿಗೆಗಳ ಒಂದು ಭಾಗ ಇದಾಗಿದೆ.

ಇದರ ಎತ್ತರ 4.3 ಮೀಟರ್‍ಗಳು. ಮೇಲಿನ ಮಹಡಿಗಳನ್ನು ತಲುಪಲು ಎಲಿವೇಟರ್ ಅಳವಡಿಸಿದ ನಂತರ 1983ರಲ್ಲಿ ಮೂಲ ಮೆಟ್ಟಿಲುಗಳನ್ನು ತೆಗೆದು ಹಾಕಲಾಗಿತ್ತು. ಇದನ್ನು ನಂತರ 2 ರಿಂದ 9 ಮೀಟರ್ ಎತ್ತರಗಳಂತೆ 24 ಭಾಗಗಳಾಗಿ ಮಾಡಲಾಗಿತ್ತು. ಕಳೆದ ವರ್ಷ ಡಿಸೆಂಬರ್‍ನಲ್ಲಿ ಎಲ್ಲ ಭಾಗಗಳನ್ನು ಮಾರಾಟ ಮಾಡಲಾಗಿತ್ತು. ವಿಶ್ವದ ವಿವಿಧ ದೇಶಗಳ ಪ್ರಾಚೀನ ವಸ್ತುಗಳ ಸಂಗ್ರಹಕರು ದುಬಾರಿ ಬೆಲೆ ತೆತ್ತು ಇವುಗಳನ್ನು ಖರೀದಿಸಿದ್ದರು.
2016ರಲ್ಲಿ ಇಂಥ ಒಂದು ಮೆಟ್ಟಿಲು 5,72,000 ಡಾಲರ್‍ಗಳಿಗೆ ಹರಾಜು ಆಗಿತ್ತು.

Facebook Comments