ಇಂದು ಭೂ ಕಕ್ಷೆ ಮೂಲಕ ಹಾದು ಹೋಗಲಿದೆ ಗೀಜಾ ಪಿರಮಿಡ್‍ಗಿಂತ 2 ಪಟ್ಟು ದೊಡ್ಡದಾದ ಉಲ್ಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.6- ವಿಶ್ವದ 8 ಅದ್ಭುತಗಳಲ್ಲಿ ಒಂದಾದ ಈಜಿಪ್ಟ್ ನ ಗೀಜಾ ಪಿರಮಿಡ್‍ಗಿಂತಲೂ ಎರಡು ಪಟ್ಟು ದೊಡ್ಡದಾದ ಬೃಹತ್ ಉಲ್ಕೆಯೊಂದು ಇಂದು ಭೂಮಿ ಕಕ್ಷೆಯನ್ನು ಹಾದು ಹೋಗಲಿದೆ.

465824 (2010 ಎಫ್‍ಆರ್) ಹೆಸರಿನ ಈ ದೈತ್ಯಾಕಾರದ ಆಕಾಶಕಾಯ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಗೀಜಾದ ಪಿರಾಮಿಡ್‍ಗಿಂತಲೂ ಎರಡು ಪಟ್ಟು ದೊಡ್ಡದಾದ ಈ ಉಲ್ಕೆ 270 ಮೀಟರ್ ಸುತ್ತಳತೆ ಹೊಂದಿದೆ. ಭೂ ಕಕ್ಷೆ ಇರುವ 4.6 ದಶಲಕ್ಷ ಮೈಲಿಗಳ ದೂರದಲ್ಲಿ ಈ ಆಕಾಶಕಾಯ ಹಾದು ಹೋಗಲಿದೆ.

ಈ ವಿದ್ಯಮಾನ ಸಂಭವಿಸುವ ಸ್ಥಳವು ಭೂಮಿಯಿಂದ ಚಂದ್ರನ ತನಕ ಇರುವ ಅಂತರಕ್ಕಿಂತ 20 ಪಟ್ಟು ದೂರವಿದೆ. ಇದೊಂದು ಅತ್ಯಂತ ಅಪರೂಪದ ವಿದ್ಯಮಾನ. ದೈತ್ಯಾಕಾರದ ಆಕಾಶಕಾಯ ಇಂದು ಭೂಮಿ ಕಕ್ಷೆಯನ್ನು ಹಾದು ಹೋಗಲಿದೆ.

ಸಮಾಧಾನಕರ ಸಂಗತಿ ಎಂದರೆ ಈ ಉಲ್ಕೆ ಭೂಮಿ ಮೇಲ್ಮೈ ಮೇಲೆ ಅಪ್ಪಳಿಸುವುದಿಲ್ಲ. ಹೀಗಾಗಿ ಇದೊಂದು ಸುರಕ್ಷಿತ ಸಂಗತಿ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಈ ಉಲ್ಕೆ ಭೂ ಕಕ್ಷೆ ಮೂಲಕ ಹಾದು ಹೋಗುವ ಕಾರಣ ಇದಕ್ಕೆ ಅಪೋಲೋ ಆಸ್ಟ್ರಿಯೋರ್ಡ್ ಎಂದು ಹೆಸರಿಡಲಾಗಿದೆ.

Facebook Comments