ಲಾಂಚ್ ಆಯ್ತು ‘ಪತಂಜಲಿ ಸಿಮ್ ಕಾರ್ಡ್’, ಆಫರ್ ಏನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Baba-Rambdev

ಹರಿದ್ವಾರ, ಮೇ 28-ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಬಿಎಸ್‍ಎನ್‍ಎಲ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್‍ಗಳನ್ನು ಬಿಡುಗಡೆಗೊಳಿಸಿದೆ. ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಗುರು ರಾಮ್ ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್‍ಗಳನ್ನು ಬಿಡುಗಡೆ ಮಾಡಿದರು. ಬಿಎಸ್ ಎನ್ ಎಲ್ ಸ್ವದೇಶಿ ನೆಟ್‍ವರ್ಕ್ ಆಗಿದ್ದು, ಇದರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ದೇಶಕ್ಕೆ ಕಲ್ಯಾಣಕ್ಕೆ ಇವರೆಡೂ ಕೆಲಸ ಮಾಡಲಿವೆ ಎಂದಿದ್ದಾರೆ.   ಸದ್ಯ ಈ ಸಿಮ್ ಕಾರ್ಡ್‍ಗಳು ನೌಕರರು ಮತ್ತು ಕಚೇರಿ ಪದಾಧಿಕಾರಿಗಳಿಗೆ ಮಾತ್ರ ಲಭ್ಯವಾಗಲಿದ್ದು, ಕೇವಲ 144 ರೂ. ರಿಚಾರ್ಜ್ ಮಾಡಿಸಿದರೆ ದೇಶಾದ್ಯಂತ ಉಚಿತ ಕರೆಗಳು, 2 ಜಿಬಿ ಡೇಟಾ ಮತ್ತು 100 ಎಸ್‍ಎಮ್‍ಎಸ್‍ಗಳ ಲಾಭ ಪಡೆಯಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin