‘ಪವಿತ್ರ’ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪವನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ಚಂದನವನದಲ್ಲಿ ಮತ್ತೆ ಮದುವೆಯ ಸಮಾರಂಭ ಮನೆ ಮಾಡಿದೆ. ಇಂದು ಬೆಳಗ್ಗೆ ನಟ ಹಾಗೂ ನಿರ್ದೇಶಕ ಪವನ್‍ಕುಮಾರ್ ಅವರು ಪವಿತ್ರಾ ಅವರನ್ನು ವರಿಸುವ ಮೂಲಕ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಇಂದು ನಗರದ ಖಾಸಗಿ ಹೊಟೇಲ್‍ನಲ್ಲಿ ಇಂದು ಬೆಳಗ್ಗೆ 7.30 ರಿಂದ 8.30ರ ವರೆಗೆ ನಡೆದ ಶುಭ ಲಗ್ನದಲ್ಲಿ ಪವನ್‍ಕುಮಾರ್ ಅವರು ಪವಿತ್ರಾ ಅವರನ್ನು ವರಿಸಿದ್ದಾರೆ. ನಂತರ ಆರತಕ್ಷತೆ ಕಾರ್ಯಕ್ರಮ ನಡೆಯಿತು.

ಸ್ಯಾಂಡಲ್‍ವುಡ್‍ನ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್‍ರ ಪುತ್ರನಾಗಿರುವ ಪವನ್ ಅವರು ವಿಷ್ಣುವರ್ಧನ್ ನಟಿಸಿದ್ದ ಜಮೀನಾದ್ರು ಚಿತ್ರದಲ್ಲಿ ಬಾಲ್ಯನಟನಾಗಿ ಅಭಿನಯಿಸಿದ ನಂತರ ರತ್ನ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ನಂತರ ನವಮಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಚಂದನವನದಲ್ಲಿ ಸ್ನೇಹಜೀವಿ ಎಂದೇ ಬಿಂಬಿಸಿಕೊಂಡಿರುವ ಎಸ್.ನಾರಾಯಣ್ ಅವರ ಪುತ್ರನ ಮದುವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,

ಸಚಿವ ಗೋಪಾಲಯ್ಯ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು, ನಟರಾದ ಶ್ರೀಮುರಳಿ, ಶರಣ್, ನಟಿಯರಾದ ಅಮೂಲ್ಯ, ಸುಧಾರಾಣಿ, ಪ್ರಮೀಳಾ ಜೋಷಾಯ್, ಮಾಳವಿಕಾ, ಹಿರಿಯ ನಟರಾದ ದೇವರಾಜ್, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಅವಿನಾಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕರಾದ ರಾಜೇಂದ್ರಸಿಂಗ್‍ಬಾಬು ಮುಂತಾದವರು ಆಗಮಿಸಿ ನೂತನ ವಧು-ವರರನ್ನು ಹಾರೈಸಿದರು.

Facebook Comments