ಲಂಚ ಪಡೆಯುತ್ತಿದ್ದ ಪಿಡಿಒ ಎಸಿಬಿ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬಾದಾಮಿ,ಏ.13- ತಾಲೂಕಿನ ಕುಳಗೇರಿಯ ಗ್ರಾಪಂ ಅಭಿವೃದ್ದಿ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ದಾಳಿ ನಡೆಸಿ ಪಿಡಿಒ ಅಧಿಕಾರಿಯನ್ನು ಬಂಧಿಸಿದ್ದಾರೆ.

ತಾಲೂಕಿನ ಕುಳಗೇರಿ ಗ್ರಾಪಂಕಚೇರಿಯ ಗ್ರಾಪಂ ಅಭಿವೃದ್ದಿ ಸುಭಾಸ ತಿಮ್ಮನಗೌಡರ ಅವರು ಗ್ರಾಮದ ಮಲ್ಲಿಕಾರ್ಜುನ ಎಂಬುವವರಿಂದ 25 ಸಾವಿರ ಹಣ ಲಂಚ ಸ್ವೀಕರಿಸುವ ವೇಳೆ ಹಟಾತ್ ದಾಳಿ ನಡೆಸಿದ ಎಸಿಬಿಯವರು ಗ್ರಾಪಂ ಅಭಿವೃದ್ದಿ ಸುಭಾಸ ತಿಮ್ಮನಗೌಡರ ಅವರನ್ನು ಬಂಧಿಸಿದ್ದಾರೆ.

ಅವರು ಮಲ್ಲಿಕಾರ್ಜುನ ಅವರ 5 ನಿವೇಶನಗಳ ಆರ್‍ಟಿಸಿ ಕೆಲಸಕ್ಕೆ ಅವರಿಂದ 25 ಸಾವಿರ ಲಂಚ ಕೇಳಿದ್ದರು.  ಹಣ ನೀಡುವ ಸಂದರ್ಭದಲ್ಲಿ ಎಸಿಬಿಯ ಡಿಎಸ್‍ಪಿ, ಸಿಪಿಐ ನೇತೃತ್ವದಲ್ಲಿ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಸುಭಾಸ ತಿಮ್ಮನಗೌಡರ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Facebook Comments