ಉಡುಪಿ ಪೇಜಾವರ ಮಠದ ಶ್ರೀಗಳಿಂದ ಧರ್ಮಸ್ಥಳ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ಅ.26- ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 53ನೆ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ  ಪ್ರಸನ್ನ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸಾಂಪ್ರಾದಾಯಿಕವಾಗಿ ಪೇಜಾವರ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಸ್ವಾಮೀಜಿಯವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.  ಕ್ಷೇತ್ರದ ವತಿಯಿಂದ ಹೆಗ್ಗಡೆಯವರು ಸ್ವಾಮೀಜಿ ಅವರನ್ನು ಗೌರವಿಸಿದರು.

ಅದೇ ರೀತಿ ಪೇಜಾವರ ಶ್ರೀಗಳು ಡಾ. ಹೆಗ್ಗಡೆಯವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದರು. ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಅವರನ್ನೂ ಶ್ರೀಗಳು ಗೌರವಿಸಿದರು. ಪೇಜಾವರ ಶ್ರೀಗಳು ಡಾ. ಹೆಗ್ಗಡೆಯವರೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಉಪಸ್ಥಿತರಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಧರ್ಮಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ನಡೆಯುತ್ತಿದೆ.

ಅವರ 53ನೆ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಅಭಿನಂದನೆ ಸಲ್ಲಿಸಲು ಹಾಗೂ ಕೃಷ್ಣಾನುಗ್ರಹ ಪ್ರಾರ್ಥನೆ ಮಾಡುವುದಗೋಸ್ಕರ ಆಗಮಿಸಿದ್ದೇವೆ ಎಂದರು. ಉಡುಪಿಗೆ ಹೋಗುವ ದಾರಿ ಮಧ್ಯೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದುಕೊಂಡು ಅವರಿಗೆ ಕೃಷ್ಣಾನುಗ್ರಹವನ್ನು ಪ್ರಾರ್ಥಿಸಿ ಹೊರಡುತ್ತಿದ್ದೇವೆ ಎಂದರು.

ಈ ಸಂದರ್ಭ ನಾವು ಹೆಗ್ಗಡೆಯವರಿಗೆ ಭಗವಂತನಲ್ಲಿ ಆಯುರಾರೋಗ್ಯವನ್ನು ಪಾರ್ಥನೆ ಮಾಡುತ್ತಾ, ಸಮಾಜ ಸೇವೆ, ಇನ್ನು ಹೆಚ್ಚಿನ ಹ ಸೇವೆಗಳು ಅವರಿಂದ ಆಗುವಂತೆ ಭಗವಂತ ಅವರಿಗೆ ಶಕ್ತಿ ಸಾಮಥ್ರ್ಯಗಳು ನೀಡಲಿ ಎಂದು ಶ್ರೀ ಕೃಷ್ಣ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

Facebook Comments

Sri Raghav

Admin