ನಾಳೆ ಪ್ರಧಾನಿಯಿಂದ ಮಹತ್ವದ ಪಿಂಚಣಿ ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಸೆ.11-ಕೃಷಿಕರು, ಸಣ್ಣ ವ್ಯಾಪಾರಿಗಳು. ಮತ್ತು ನಿರುದ್ಯೋಗಿಗಳಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವದ ಪಿಂಚಣಿ ಯೋಜನೆಗಳನ್ನು ನಾಳೆ ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಾಳೆ ನಡೆಯಲಿರುವ ಸಮಾರಂಭದಲ್ಲಿ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಮಾನ್‍ಧನ್ ಯೋಜನಾ, ಪ್ರಧಾನಮಂತ್ರಿ ಲಘು ವ್ಯಾಫಾರಿಕ್ ಮಾನ್‍ಧನ್ ಯೋಜನಾ ಮತ್ತು ಸ್ವರೋಜರ್ ಪಿಂಚಣಿ- ಈ ಮೂರು ಮಹತ್ವದ ಯೋಜನೆಗಳಿಗೆ ವಿಧ್ಯುಕ್ತ ಚಾಲನೆ ನೀಡುವರು.

ಇದೇ ಸಂದರ್ಭದಲ್ಲಿ ಮೋದಿ ಜಾರ್ಖಂಡ್ ವಿಧಾನಸಭೆಯ ನೂತನ ಕಟ್ಟಡ ಮತ್ತು ಸಾಹಿಬ್‍ಗಂಜ್‍ನಲ್ಲಿ ಬಹು ಮಾದರಿ ನಿಲ್ದಾಣವನ್ನು ಸಹ ಉದ್ಘಾಟಿಸುವರು ಎಂದು ಖಾರ್ಖಂಡ್ ಮುಖ್ಯಮಂತ್ರಿ ರಘುಬೀರ್ ದಾಸ್ ತಿಳಿಸಿದ್ದಾರೆ.

ಇದಲ್ಲದೇ ಪ್ರಧಾನಿ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮಗಳೂ ಇವೆ. ದೇಶಾದ್ಯಂತ 462 ಎಕಲವ್ಯ ಮಾದರಿ ಶಾಲೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಪ್ರಗತಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.

Facebook Comments