ರೈತರು, ವ್ಯಾಪಾರಿಗಳಿಗೂ ಪಿಂಚಣಿ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಸೆ.12- ಕೃಷಿಕರು, ಸಣ್ಣ ವ್ಯಾಪಾರಿಗಳು ಮತ್ತು ನಿರುದ್ಯೋಗಿಗಳಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವದ ಪಿಂಚಣಿ ಯೋಜನೆಗಳನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.  ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಮಾನ್‍ಧನ್ ಯೋಜನಾ, ಪ್ರಧಾನಮಂತ್ರಿ ಲಘು ವ್ಯಾಫಾರಿಕ್ ಮಾನ್‍ಧನ್ ಯೋಜನಾ ಮತ್ತು ಸ್ವರೋಜಾರ್ ಪಿಂಚಣಿ- ಈ ಮೂರು ಮಹತ್ವದ ಯೋಜನೆಗಳಿಗೆ ವಿಧ್ಯುಕ್ತ ಚಾಲನೆ ನೀಡಿದರು.

ಈ ಪಿಂಚಣಿ ಯೋಜನೆಗಳಡಿ ಫಲಾನುಭವಿಗಳಿಗೆ ಮಾಸಿಕ ಮೂರು ಸಾವಿರ ರೂ.ಗಳ ಮಾನ್‍ಧನ್ ಲಭಿಸಲಿದೆ. ಬಜೆಟ್‍ನಲ್ಲಿ ಘೋಷಿಸುತ್ತಿದ್ದಂತೆ ಈ ಮೂರು ಮಹತ್ವದ ಪಿಂಚಣಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇಂದಿನಿಂದಲೇ ಜಾರಿಗೆ ಬಂದಿವೆ.

ಇದೇ ಸಂದರ್ಭದಲ್ಲಿ ಮೋದಿ ಜಾರ್ಖಂಡ್ ವಿಧಾನಸಭೆಯ ನೂತನ ಕಟ್ಟಡ ಮತ್ತು ಸಾಹಿಬ್‍ಗಂಜ್‍ನಲ್ಲಿ ಬಹು ಮಾದರಿ ನಿಲ್ದಾಣವನ್ನು ಸಹ ಉದ್ಘಾಟಿಸಿದರು. ಜಾರ್ಖಂಡ್ ಮುಖ್ಯಮಂತ್ರಿ ರಘುಬೀರ್ ದಾಸ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಇದಲ್ಲದೆ, ಪ್ರಧಾನಿ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ನೆರವೇರಿಸಿದರು. ದೇಶಾದ್ಯಂತ 462 ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಪ್ರಗತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

Facebook Comments