ಮಧ್ಯಮ ವರ್ಗವನ್ನು ಬಡವರನ್ನಾಗಿ ಮಾಡಿದ ಕೇಂದ್ರ ಸರ್ಕಾರ: ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.23-ಕೊರೊನಾ ಸೋಂಕಿತರಿಗೆ ಐಸಿಯು ಹಾಗೂ ಸರಿಯಾದ ಸಮಯಕ್ಕೆ ಅಮ್ಲಜನಕ ಸಿಗದೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ನೀವೆ ಹೊಣೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿದ್ದರೂ ಆಮ್ಲಜನಕದ ಅಭಾವ ಹಾಗೂ ಐಸಿಯು ಬೆಡ್‍ಗಳ ಕೊರತೆ ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೊರೊನಾ ಬಂದರೆ ಅಮ್ಲಜನಕದ ಮಟ್ಟ ಕುಸಿಯುತ್ತದೆ. ಆದರೆ, ಐಸಿಯು ಬೆಡ್ ಸಿಗದೆ ಅಕ್ಸಿಜನ್ ಕೊರತೆಯಿಂದ ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ನೀವೆ ಹೊಣೆ ಎಂದು ಅವರು ಕಿಡಿ ಕಾರಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದಾಖಲೆಯ 3,32 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡು 2263 ಮಂದಿ ಮಹಾಮಾರಿಗೆ ಬಲಿಯಾಗಿರುವ ಬೆನ್ನಲ್ಲೇ ರಾಹುಲ್ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಧ್ಯಮ ವರ್ಗವನ್ನು ಬಡವರನ್ನಾಗಿ ಮಾಡಿದ ಕೇಂದ್ರ ಸರ್ಕಾರ 
ಮಧ್ಯಮ ವರ್ಗದ ಜನ ಜೀವನವನ್ನು ನಾಶ ಮಾಡಿ ಕೇಂದ್ರ ಸರ್ಕಾರ ಅವರನ್ನು ಬಡವರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಕಿಡಿಕಾರಿದ್ದಾರೆ.

ಬಡತನ ಎಂಬುದನ್ನು ಕೇವಲ ಅಂಕಿ-ಸಂಖ್ಯೆ ಮೇಲೆ ಅಳತೆ ಮಾಡುವುದಲ್ಲ. ಈಗ ಸಮಾಜದ ಎಲ್ಲಾ ಜನರು ಎಚ್ಚೆತ್ತುಕೊಂಡಿದ್ದಾರೆ. ಕೇಂದ್ರ ಸರ್ಕಾರ ನೂರಾರು ಕುಟುಂಬಗಳನ್ನು ಜೀತ ವ್ಯವಸ್ಥೆಗೆ ದೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಮ ವರ್ಗದ ಆದಾಯ ಮೂಲವನ್ನು ಹೊಸಕಿ ಹಾಕಿರುವ ಕೇಂದ್ರ ಸರ್ಕಾರ, ಅವರನ್ನು ದುರ್ಬಲ ವರ್ಗಕ್ಕೆ ತಳ್ಳಿದೆ. ಬಿಜೆಪಿ ಆಡಳಿತದಲ್ಲಿ ಎಲ್ಲವೂ ಸರ್ವನಾಶವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

 

Facebook Comments