ರಜನಿ ಹೇಳಿಕೆ ಬೆನ್ನಲ್ಲೇ ಪೆರಿಯರ್ ಪ್ರತಿಮೆ ಭಗ್ನ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಜ.24- ಸಮಾಜ ಸುಧಾರಕ ಪೆರಿಯಾರ್ ಬಗ್ಗೆ ಸೂಪರ್‍ ಸ್ಟಾರ್ ರಜನಿಕಾಂತ್ ನೀಡಿರುವ ಹೇಳಿಕೆಗಳು ಭಾರೀ ವಿವಾದ ಕಾರಣವಾಗಿರುವ ನಡುವೆಯೇ ತಮಿಳುನಾಡಿನ ಚೆಂಗಲ್ಪೆಟ್ಟೆ ಜಿಲ್ಲೆಯ ಕಲಿಯಪಟ್ಟೈಗ್ರಾಮದಲ್ಲಿ ಪೆರಿಯಾರ್ ಪ್ರತಿಮೆಯನ್ನು ದುಷ್ಕರ್ಮಿಗಳು ಇಂದು ಧ್ವಂಸಗೊಳಿಸಿದ್ದಾರೆ. 1971ರಲ್ಲಿ ಸೇಲಂನಲ್ಲಿ ಪೆರಿಯಾರ್ ನಡೆಸಿದ ರ್ಯಾಲಿಯಲ್ಲಿ ರಾಮ-ಸೀತೆಯ ವಿವಸ್ತ್ರ ಪ್ರತಿಮೆಗಳು ಪಾದರಕ್ಷೆಗಳಿಂದ ಅಲಂಕರಿಸಲ್ಪಟ್ಟವು ಎಂದು ರಜನಿಕಾಂತ್ ಕಳೆದ ವಾರ ಹೇಳಿಕೆ ನೀಡಿದ್ದರು. ಇದು ವಾದ-ವಿವಾದಕ್ಕೆ ಕಾರಣವಾಗಿತ್ತು.

ಈ ಬೆನ್ನಲ್ಲೆ ಚೆಂಗಲ್ಪೆಟ್ಟೆಯ ಕಲ್ಲಿಯಪಟ್ಟೆ ಗ್ರಾಮದಲ್ಲಿ ಯಾರೋ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ಪುತ್ಥಳಿಯ ಬಲಗೈ ಮತ್ತು ಮುಖಕ್ಕೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.  ಜನವರಿ 14ರಂದು ತಮಿಳು ನಿಯತಕಾಲಿಕೆಯ ತುಘಲಕ್ ಪತ್ರಿಕೆಯ 50ನೇ ವಾರ್ಷಿಕೋತ್ಸವ ಮತ್ತು ಓದುಗರ ಸಂಪರ್ಕ ಕಾರ್ಯಕ್ರಮದಲ್ಲಿ ರಜನಿ ಭಾಷಣ ಮಾಡಿದ್ದರು.

ತಮ್ಮ ಭಾಷಣದಲ್ಲಿ ಸಮಾಜ ಸುಧಾರಕ ಪೆರಿಯಾರ್ ಬಗ್ಗೆ ಹೇಳುತ್ತಾ, ಪೆರಿಯಾರ್ ನಡೆಸಿದ ರ್ಯಾಲಿಯಲ್ಲಿ ಭಗವಾನ್ ಶ್ರೀ ರಾಮಚಂದ್ರನ ವಿವಸ್ತ್ರಗೊಂಡ ಚಿತ್ರಗಳು ಸೀತಾ ಪಾದರಕ್ಷೆ ,ವೈಶಿಷ್ಟ್ಯದ ಹಾರದಿಂದ ಅಲಂಕರಿಸಲಾಗಿತ್ತು. ಯಾವುದೇ ಸುದ್ದಿವಾಹಿನಿಗಳು ಅಂದು ಇದನ್ನು ಪ್ರಕಟಿಸಿರಲಿಲ್ಲ ಎಂದು ಹೇಳಿದ್ದಾರೆ.  ಈ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿರುವ ರಜನಿಕಾಂತ್, ತಾನು ತಿಳಿಸಿರುವುದೆಲ್ಲ ನಿಜ.

ಆ ಹೇಳಿಕೆಗೆ ಬದ್ದವಾಗಿದ್ದೇನೆ. ನಾನು ಏನೂ ಮಾತನಾಡಿದರೂ ವಿವಾದವಾಗಿ ಮಾರ್ಪಟ್ಟಿದೆ. ಕೆಲವು ಪತ್ರಿಕೆಗಳಲ್ಲಿ ಮುದ್ರಿತವಾದದ್ದನ್ನು ನಾನು ಓದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.
ನಾನು ಕಲ್ಪನೆಯಿಂದ ಏನನ್ನೂ ಹೇಳಲಿಲ್ಲ. ನಾನು ಹೇಳಿದ್ದಕ್ಕೆ ಕ್ಷಮೆಯಾಚಿಸುವುದಿಲ್ಲ. ನಾನು ನೋಡಿದ್ದನ್ನು ಹೇಳುತ್ತಿದ್ದೇನೆ ಮತ್ತು ಪ್ರತಿಭಟನಾಕಾರರು ಕಂಡದ್ದನ್ನು ಹೇಳುತ್ತಿದ್ದಾರೆ ಎಂದು ರಜಿನಿ ಸಮರ್ಥಿಸಿಕೊಂಡಿದ್ದಾರೆ.

Facebook Comments