ಕೊರೋನಾ ಸೋಂಕಿತ ವ್ಯಕ್ತಿ ಸ್ಕೈವಾಕ್‍ನಿಂದ ಬಿದ್ದು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11- ನಗರದ ಚಂದ್ರಾಲೌಟ್ ಠಾಣಾ ವ್ಯಾಪ್ತಿಯ ನಾಗರಭಾವಿ ಸರ್ಕಲ್ ಸಮೀಪದ ಸ್ಕೈವಾಕ್‍ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಕೊರೊನಾ ಪಾಸಿಟೀವ್ ಇರುವುದು ಇದೀಗ ವರದಿಯಿಂದ ದೃಢಪಟ್ಟಿದೆ. ಜೂ.8ರಂದು ಮಧ್ಯಾಹ್ನ ಸುಮಾರು 40 ವರ್ಷದ ವ್ಯಕ್ತಿ ಸ್ಕೈವಾಕ್‍ನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ವ್ಯಕ್ತಿಯ ವಾರಸುದಾರರು ಪತ್ತೆಯಾಗದ ಕಾರಣ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಕೋವಿಡ್ ನಿಯಮದಂತೆ ಈ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು , ಇದೀಗ ವರದಿಯಲ್ಲಿ ಈ ವ್ಯಕ್ತಿಗೆ ಕೊರೊನಾ ಪಾಸಿಟೀವ್ ಇರುವುದು ದೃಢಪಟ್ಟಿದೆ.

ಈ ವ್ಯಕ್ತಿಯ ವಾರಸುದಾರರು ಪತ್ತೆಯಾಗಿಲ್ಲ. ಗುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿರುವ ಈತ ಗುಲಾಬಿ ಬಣ್ಣದ ಟೀ ಶರ್ಟ್, ಖಾಕಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ವಾರಸುದಾರರು ಕೂಡಲೇ ಚಂದ್ರಾಲೇಔಟ್ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

Facebook Comments