ಪೆಟ್ರೋಲ್, ಡೀಸೆಲ್ ಬೆಲೆದಲ್ಲಿ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.25- ಸತತ ಎರಡನೆ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದರ ತಗ್ಗಲಿದೆ ಎಂದು ಹೇಳಲಾಗಿದೆ. ಪೆಟ್ರೋಲ್ 23 ಪೈಸೆ ಹಾಗೂ ಡೀಸೆಲ್ 19 ಪೈಸ್ ಕಡಿತಗೊಳಿಸಲಾಗಿದ್ದು, ದೆಹಲಿಯಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ 90.99 ರೂ., ಬೆಂಗಳೂರಿನಲ್ಲಿ 94.04 ರೂ., ಚೆನ್ನೈನಲ್ಲಿ 92.95, ಹೈದರಾಬಾದ್‍ನಲ್ಲಿ 94.61ರೂ, ಕೊಲ್ಕತ್ತಾದಲ್ಲಿ 91.18 ರೂ., ಹಾಗೂ ಮುಂಬೈನಲ್ಲಿ 97.40 ರೂ.ಗೆ ಮಾರಾಟ ನಡೆಯುತ್ತಿದೆ.

ಬರುವ ದಿನಗಳಲ್ಲಿ ಸುಮಾರು 2 ರೂ.ಗಳವರೆಗೂ ಇಳಿಯಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‍ಗೆ 64 ಡಾಲರ್‍ಗೆ ಇಳಿದಿರುವ ಕಾರಣ ದೇಶೀಯ ತೈಲ ಬೆಲೆಯಲ್ಲಿ ದರ ಇಳಿಕೆ ಶುರುವಾಗಿದೆ.

Facebook Comments