ಮತ್ತಷ್ಟು ದುಬಾರಿಯಾಯ್ತು ಪೆಟ್ರೋಲ್, ಡೀಸಲ್‍

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.14-ಮತ್ತೆ ತೈಲ ಬೆಲೆ ಏರಿಕೆಯಾಗಿರುವುದರಿಂದ ದೇಶದಲ್ಲಿ ಪೆಟ್ರೋಲ್,ಡೀಸಲ್ ಮತ್ತೆ ದುಬಾರಿಯಾಗಿದೆ. ಒಂದು ವಾರದಿಂದ ಈಚೆಗೆ ನಾಲ್ಕು ಭಾರಿ ತೈಲ ಬೆಲೆ ಏರಿಕೆಯಾಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ 29 ಪೈಸೆ ಹಾಗೂ ಡೀಸಲ್ ಮೇಲೆ 34 ಪೈಸೆ ಹೆಚ್ಚಳವಾಗಿದೆ.

ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92.34 ರೂ. ಹಾಗೂ ಡೀಸಲ್ ಬೆಲೆ 82.95 ರೂ.ಗಳಾಗಿದೆ. ರಾಜಸ್ತಾನ, ಮಧ್ಯಪ್ರದೇಶ ಮತ್ತಿತರ ಕೆಲ ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್,ಡೀಸಲ್ ಬೆಲೆ 100 ರೂ.ಗಳ ಗಡಿ ತಲುಪಿದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ತೈಲ ಬೆಲೆ 100 ರೂ.ಗಳ ಅಂಚಿಗೆ ಬಂದು ನಿಂತಿದೆ. ತೈಲ ಉತ್ಪನ್ನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 103.27 ರೂ.ಹಾಗೂ ಡೀಸಲ್ ಬೆಲೆ 95.70 ರೂಗಳಾಗಿದೆ.

ಆಯಾ ರಾಜ್ಯಗಳು ತೈಲೋತ್ಪನ್ನಗಳ ಮೇಲೆ ವಿಧಿಸುವ ತೆರಿಗೆ ಆಧಾರದ ಮೇಲೆ ಪೆಟ್ರೋಲ್,ಡೀಸಲ್ ಬೆಲೆ ನಿರ್ಧಾರವಾಗಲಿದೆ.

Facebook Comments

Sri Raghav

Admin