ತಿಂಗಳಲ್ಲಿ 13ನೇ ಭಾರಿಗೆ ತೈಲ ಬೆಲೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.25- ತೈಲ ಬೆಲೆ ಏರಿಕೆಯ ನಾಗಾಲೋಟ ಮುಂದುವರೆದಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 23 ಪೈಸೆ ಹಾಗೂ ಡೀಸಲ್ ಬೆಲೆ 25 ಪೈಸೆ ಏರಿಕೆಯಾಗಿರುವುದರಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಇಂಧನ ಬೆಲೆ 100 ರೂ.ಗಳ ಸನಿಹಕ್ಕೆ ಬಂದು ನಿಂತಿದೆ.

ಒಂದು ತಿಂಗಳಿನಲ್ಲಿ 13 ಬಾರಿ ತೈಲ ಬೆಲೆ ಏರಿಕೆಯಾಗಿರುವುದು ದೇಶದಲ್ಲಿ ಇದೆ ಮೊದಲು ಎಂಬ ದಾಖಲೆಯೂ ಸೃಷ್ಟಿಯಾಗಿದೆ.ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 93.44 ಹಾಗೂ ಡೀಸಲ್ ಬೆಲೆ 84.32 ರೂ.ಗಳಿಗೆ ಏರಿಕೆಯಾಗಿದೆ.

ವಾಣಿಜ್ಯ ರಾಜಧಾನಿಯಲ್ಲಿ ಪೆಟ್ರೋಲ್ 99.71 ರೂ. ಹಾಗೂ ಡೀಸಲ್ 91.57 ರೂ.ಗಳಿಗೆ ಏರಿಕೆಯಾಗಿದೆ. ಸ್ಥಳೀಯ ತೆರಿಗೆ ಹೆಚ್ಚಿರುವ ಕೆಲ ರಾಜ್ಯಗಳಲ್ಲಿ ಈಗಾಗಲೆ ಇಂಧನ ಬೆಲೆ 100 ರೂ.ಗಳ ಗಡಿ ದಾಟಿದೆ. ಉಳಿದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ನೂರು ರೂ.ಗಳ ಅಸುಪಾಸಿಗೆ ಬಂದು ನಿಂತಿದೆ.

Facebook Comments

Sri Raghav

Admin