ತಿಂಗಳಲ್ಲಿ 15ನೇ ಭಾರಿಗೆ ಪೆಟ್ರೋಲ್‍-ಡೀಸಲ್ ಬೆಲೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.29-ಒಂದು ತಿಂಗಳಲ್ಲಿ 15ನೇ ಭಾರಿಗೆ ತೈಲ ಬೆಲೆ ಏರಿಕೆಯಾಗುವುದರೊಂದಿಗೆ ಇತಿಹಾಸ ನಿರ್ಮಿಸಿದೆ. ಸತತ ಬೆಲೆ ಏರಿಕೆಯಿಂದ ದೇಶದ ಬಹುಪಾಲು ರಾಜ್ಯಗಳಲ್ಲಿ ಇಂಧನ ಬೆಲೆ 100ರೂ.ಗಳ ಗಡಿ ದಾಟಿದೆ.

ಪ್ರತಿ ಲೀಟರ್ ಪೆಟ್ರೋಲ್‍ಗೆ 26 ಪೈಸೆ ಹಾಗೂ ಡೀಸಲ್ ಮೇಲೆ 28 ಪೈಸೆ ಏರಿಕೆಯಾಗಿರುವುದರಿಂದ ಮುಂಬೈನಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ಮೀರಿದೆ.ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100.19 ರೂ.ಗಳಾಗಿದ್ದರೆ, ಡೀಸಲ್ ದರ 92.17ರೂ.ಗಳಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಈಗಾಗಲೇ ತೈಲ ಬೆಲೆ 100 ರೂ.ಗಳ ಗಡಿ ದಾಟಿದೆ.ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ 93.94 ರೂ. ಹಾಗೂ ಡೀಸಲ್ ಬೆಲೆ 84.89 ರೂ.ಗಳಾಗಿದೆ. ಆಯಾ ರಾಜ್ಯಗಳ ತೆರಿಗೆ ಆಧಾರದ ಮೇಲೆ ಅಲ್ಲಿನ ತೈಲ ಬೆಲೆ ನಿಗಧಿಯಾಗಿರುವುದರಿಂದ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಬೆಲೆ ಇರುವುದು ಸಾಮಾನ್ಯ.

ಈಗಾಗಲೇ ಬಹುಪಾಲು ರಾಜ್ಯಗಳಲ್ಲಿ ಇಂಧನ ಬೆಲೆ 100 ರೂ.ಗಳ ಅಂಚಿಗೆ ಬಂದು ನಿಂತಿದ್ದು, ತೈಲ ಬೆಲೆ ಏರಿಕೆ ನಾಗಾಲೋಟ ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಇಂಧನ ಮತ್ತಷ್ಟು ದುಬಾರಿಯಾಗುವುದು ಗ್ಯಾರಂಟಿ.

Facebook Comments

Sri Raghav

Admin