ಇಂದಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಇಂದಿನಿಂದ ಪೆಟ್ರೋಲ್, ಡೀಸೆಲ್ ಹಾಗೂ ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಿದೆ. ತೆರಿಗೆ ಹೆಚ್ಚಳ ಮಾಡುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಪೆಟ್ರೋಲ್ ದರ 1.14 ರು. ಹೆಚ್ಚಳ, ಡೀಸೆಲ್ ದರ 1.12 ರೂ ಹೆಚ್ಚಳವಾಗಿದೆ.

ಪೆಟ್ರೋಲ್ ಮೇಲಿನ ತೆರಿಗೆಯನ್ನ ಶೇಕಡಾ 30% ರಿಂದ 32% ಕ್ಕೆ ಹೆಚ್ಚಳ ಮಾಡಲಾಗಿತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 19%ರಿಂದ ಶೇಕಡಾ 24)1% ಏರಿಕೆ ಮಾಡಲಾಗಿತ್ತು.

ಈ ಹೊಸ ಮಾರಾಟ ತೆರಿಗೆಯು ಏಪ್ರಿಲ್ 1ರಿಂದ ಜಾರಿಗೆ ಬರಬೇಕಾಗಿದೆ. ಹೊಸ ತೆರಿಗೆ ವಿಧಾನಗಳಿಂದ ಪೆಟ್ರೋಲ್ ದರವು ಲೀಟರ್‌ಗೆ 1.14 ರುಪಾಯಿ ಏರಿಕೆಯಾಗಲಿದೆ. ಡೀಸೆಲ್ ದರವು 1.12 ರುಪಾಯಿ ಹೆಚ್ಚಾಗಲಿದೆ. ಆದರೆ ಸದ್ಯ ಕೊರೊನಾವೈರಸ್ ಸೋಂಕಿನಿಂದ ದೇಶದ ಹಾಗೂ ರಾಜ್ಯದ ಜನತೆಯು ತತ್ತರಿಸಿದ್ದು, ಈ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆ ಮಾಡಿದರೆ ಜನತೆಯ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎನ್ನುವ ಚಿಂತೆಯು ಸರ್ಕಾರವನ್ನು ಕಾಡುತ್ತಿದೆ.

ಅದೇ ರೀತಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏಪ್ರಿಲ್‌ 14 ರವರೆಗೆ ರಾಜ್ಯದಲ್ಲಿ ಮದ್ಯದಂಗಡಿಗಳು ಬಂದ್‌ ಆಗಿದ್ದರೂ ಅಬಕಾರಿ ಸುಂಕ ಕೂಡ ಹೆಚ್ಚಳವಾಗಿದೆ. ಎಲ್ಲಾ ಸ್ಲ್ಯಾಬ್‌ಗಳ ಮೇಲೆ ಶೇ. 6 ರಷ್ಟು ಅಬಕಾರಿ ಸುಂಕ ಹೆಚ್ಚಿಸಿ ಅಬಕಾರಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು ಗೆಜೆಟ್‌ ಅಧಿಸೂಚನೆ ಮಾತ್ರ ಬಾಕಿ ಇದೆ.

Facebook Comments

Sri Raghav

Admin