ಬಜೆಟ್-2011 : ಪೆಟ್ರೋಲ್-ಡೀಸೆಲ್ ಸೇರಿ ಯಾವುದೇ ತೆರಿಗೆ ಏರಿಕೆ ಇಲ್ಲ
ಬೆಂಗಳೂರು, ಮಾ.8- ಕೋವಿಡ್ ಕಾರಣದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರ ಮೇಲೆ ಮತ್ತಷ್ಟು ತೆರಿಗೆ ವಿಧಿಸಿ ತೊಂದರೆ ಮಾಡಲು ಇಚ್ಚಿಸುವುದಿಲ್ಲ. ಹಾಗಾಗಿ ಪೆಟ್ರೋಲ್ , ಡೀಸೆಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ ಹಾಗೂ ಇತರೆ ಯಾವುದೇ ತೆರಿಗೆಗಳನ್ನು ಏರಿಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
2020-21ನೇ ಸಾಲಿನಲ್ಲಿ ಜನಸಾಮಾನ್ಯರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಅವರ ಮೇಲೆ ಇನ್ನಷ್ಟು ತೆರಿಗೆ ಒತ್ತಡ ಹೇರಲು ನಾನು ಇಚ್ಚಿಸುವುದಿಲ್ಲ. ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ಸರ್ಕಾರ ಕರ್ನಾಟಕ ಮಾರಾಟ ತೆರಿಗೆ (ಕೆಎಸ್ಟಿ) ವಿಸುತ್ತದೆ.
ಈ ದರ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ. ಕರ್ನಾಟಕದಲ್ಲೇ ಅತ್ಯಂತ ಕಡಿಮೆ ಇದೆ. ಆದರೂ ಸಹ 2021-22ನೇ ಸಾಲಿಗೆ ಪೆಟ್ರೋಲ್, ಡೀಸೆಲ್ ಮೇಲೆ ಕೆಎಸ್ಟಿಯನ್ನು ಹೆಚ್ಚಿಸದೆ ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗದಂತೆ ಆಯವ್ಯಯ ರೂಪಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
[ ಕರ್ನಾಟಕ ಬಜೆಟ್ – 2021 (All Updates) ]
ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದ್ದು, ಜನ ಸಾಮಾನ್ಯರು ತತ್ತರಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ಪಾಲಿನ ತೆರಿಗೆ ಕಡಿಮೆ ಮಾಡಿ ದರ ಇಳಿಕೆ ಮಾಡಬೇಕೆಂಬ ಒತ್ತಾಯ ಇತ್ತು. ಆದರೆ, ದರ ಇಳಿಕೆ ಮಾಡುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದು ಸಿಎಂ ಕಳೆದ ಎರಡು ದಿನಗಳ ಹಿಂದೆಯೇ ತಿಳಿಸಿದ್ದರು. ಹಾಗಾಗಿ ಇಂದು ದರ ಏರಿಕೆಯನ್ನೂ ಮಾಡದೆ, ಇಳಿಕೆಯನ್ನೂ ಮಾಡದೆ ಯಥಾಸ್ಥಿತಿ ಕಾಪಾಡಿಕೊಂಡಿದ್ದಾರೆ.