ಪೆಟ್ರೋಲ್-ಡಿಸೇಲ್ ಬೆಲೆ ತುಸು ಇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.24-ತೈಲ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನ ತುಸು ನಿರಾಳರಾಗುವ ಸುದ್ದಿ ಹೊರ ಬಿದ್ದಿದೆ. ವರ್ಷದಿಂದ ಏರುಗತಿಯಲ್ಲಿ ಸಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇದೇ ಮೊದಲ ಬಾರಿಗೆ ಇಳಿಕೆ ಕಂಡು ಬಂದಿದೆ. ಒಂದು ಲೀಟರ್ ಪೆಟ್ರೋಲ್ ದರ 18 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 17 ಪೈಸೆ ಇಳಿಕೆಯಾಗಿದೆ. ತೈಲ ಬೆಲೆ ದೇಶದ್ಯಾಂತ ಇಳಿಕೆಯಾಗಿದೆ. ಆದರೆ ಆಯಾ ರಾಜ್ಯಗಳ ತೆರಿಗೆ ಆಧರಿಸಿ ಇಂಧನ ಬೆಲೆ ಇಳಿಕೆ ಪ್ರಮಾಣ ಗೊತ್ತಾಗಲಿದೆ.

2020ರ ಮಾರ್ಚ್‍ನಲ್ಲಿ ಸ್ವಲ್ಪ ಮಟ್ಟಿನ ತೈಲ ಬೆಲೆ ಇಳಿಕೆಯಾಗಿತ್ತು. ನಂತರ ಏರುಗತಿಯಲ್ಲಿ ಸಾಗುತ್ತಿದ್ದ ಹಿನ್ನಲೆಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂ. ಅಂಚಿಗೆ ಬಂದಿತ್ತು. ವರ್ಷದ ನಂತರ ಮತ್ತೆ ಸ್ವಲ್ಪ ಮಟ್ಟಿನ ಬೆಲೆ ಇಳಿಕೆಯಾಗಿರುವುದು ತುಸು ನೆಮ್ಮದಿ ತಂದಿದ್ದು ಮುಂದಿನ ದಿನಗಳಲ್ಲಿ ಗಗನಮುಖಿಯಾಗಿರುವ ಇಂಧನ ಬೆಲೆ ಮತ್ತಷ್ಟು ಇಳಿಯಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Facebook Comments