ಪೆಟ್ರೋಲ್ ಬೆಲೆ ಏರಿಕೆ, ಮತ್ತೆ ಶುರುವಾಯಿತು ಜನಸಾಮಾನ್ಯರ ಮೇಲೆ ಗದಾ ಪ್ರಹಾರ: ರಾಹುಲ್ ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 6- ಚುನಾವಣೆಗಳು ಮುಗಿದವು, ಜನರ ಮೇಲೆ ಪ್ರಹಾರಗಳು ಸುರುವಾಗಿವೆ ಎಂದು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ಧವಾಗಿ ಧ್ವನಿ ಎತ್ತಿರುವ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ಉಪಚುನಾವಣೆಗಳು ಘೋಷಣೆಯಾದ ಬಳಿಕ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ತಟಸ್ಥವಾಗಿತ್ತು. ಚುನಾವಣೆ ಮುಗಿಯುವವರೆಗೂ ಒಂದಿಂಚು ಅಲುಗಾಡದ ತೈಲ ಬೆಲೆ ಏರಿಕೆ ಅನಂತರ ಹಿಂದಿನಂತೆ ಏರಿಕೆಯಾಗಲಾರಂಭಿಸಿತ್ತು. ಚುನಾವಣೆ ಘೋಷಣೆಯಾದ ಮೇಲೆ ಒಂದಷ್ಟು ದಿನ ಐದು, ಹತ್ತು ಪೈಸೆಗಳ ಲೆಕ್ಕದಲ್ಲಿ ದರ ಇಳಿಕೆಯೂ ಆಗಿತ್ತು. ಅದಕ್ಕೂ ಮೊದಲು ಕನಿಷ್ಠ 20 ರಿಂದ ಗರಿಷ್ಠ 43 ಪೈಸೆವರೆಗೂ ದರ ಏರಿಕೆಯಾಗುತ್ತಿತ್ತು. ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 25 ರೂಪಾಯಿಯಂತೆ ಹೆಚ್ಚಾಗುತ್ತಿತ್ತು.

ದರ ಏರಿಕೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತದ ಆಧಾರದ ಮೇಲೆ ತೈಲ ಕಂಪೆನಿಗಳ ದರ ನಿಗದಿ ಮಾಡುತ್ತವೆ ಎಂಬ ಸಬೂಬನ್ನು ಸರ್ಕಾರಗಳು ನೀಡುತ್ತ ಬಂದಿವೆ. ಆದರೆ ಚುನಾವಣೆಯ ಕಾಲದಲ್ಲಿ ಮಾತ್ರ ದರ ಇಳಿಕೆಯಾಗವುದು, ಚುನಾವಣೆ ಮುಗಿದ ಬಳಿಕ ದರ ಹೆಚ್ಚಳವಾಗುವುದು ಕಾಕತಾಳಿಯ ಮಾತ್ರ ಎಂಬಂತಾಗಿದೆ.

ಕೊರೊನಾ ಎರಡನೇ ಅಲೆಯಲ್ಲಿ ಆರ್ಥಿಕ ಚುಟವಟಿಕೆಗಳು ಕುಸಿದ ಹೋಗಿವೆ. ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಲ್ಲ ಬೆಂದ ಹೋಗಿದ್ದಾರೆ. ಈ ನಡುವೆ ಪೆಟ್ರೋಲ್ ಡಿಸೇಲ್ ದರ ಹೆಚ್ಚಳ ಜನ ಸಾಮಾನ್ಯರನ್ನು ಮತ್ತಷ್ಟ ಹೈರಾಣಾಗಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದು, ಚುನಾವಣ ಮುಗಿಯುತ್ತಿದ್ದಂತೆ ಸರ್ಕಾರ ಪೆಟ್ರೋಲ್ ದರ ಏರಿಕೆ ಮಾಡಿ ಜನರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ.

Facebook Comments