ಪೊಲೀಸ್ ಠಾಣೆ ಬಳಿಯೇ ಬೈಕ್‍ಗಳಿಂದ ಪೆಟ್ರೋಲ್ ಕಳವು..!

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಅ.3-ಪೊಲೀಸ್ ಠಾಣೆ ಬಳಿ ನಿಲ್ಲಿಸಿದ್ದ ಸುಮಾರು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಖತರ್ನಾಕ್ ಚೋರರು ಪೆಟ್ರೋಲ್ ಕದ್ದಿರುವ ಘಟನೆ ಸಿದ್ದಾರ್ಥನಗರದಲ್ಲಿ ನಡೆದಿದೆ. ಸಿದ್ದಾರ್ಥನಗರದ 3, 4, 5ನೇ ಕ್ರಾಸ್‍ನಲ್ಲಿ ಮನೆಗಳ ಮುಂದೆ ಹಾಗೂ ಕಾಂಪೌಂಡ್ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಪೆಟ್ರೋಲ್ ಪೈಪ್ ಕತ್ತರಿಸಿ ಕದಿಯಲಾಗಿದೆ. ಇದರಿಂದ ವಾಹನ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

ಕೆಲ ದಿನಗಳ ಹಿಂದೆ ಜೂನಿಯರ್ ಕಾಲೇಜು, ಸಿದ್ದಾರ್ಥನಗರ, ಹೊಸಬಡಾವಣೆ ವ್ಯಾಪ್ತಿಯಲ್ಲಿ ಇದೇ ರೀತಿ ಪೆಟ್ರೋಲ್ ಕಳವು ನಡೆದಿತ್ತು. ಕೆಲವು ದಿನಗಳ ಅಂತರದಲ್ಲೇ ಪೊಲೀಸ್ ಠಾಣೆ ಸಮೀಪವೇ ಮತ್ತೆ ಪೆಟ್ರೋಲ್ ಕಳವು ನಡೆದಿದ್ದು, ವಾಹನ ಸವಾರರು ಧೃತಿಗೆಟ್ಟಿದ್ದಾರೆ.

ಮೊದಲೇ ಪ್ರತಿ ದಿನ ಪೆಟ್ರೋಲ್ ದರ ಏರುತ್ತಲೇ ಇದೆ. 105 ರೂ. ದಾಟಿದೆ ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಕಳ್ಳರ ಹಾವಳಿಯಿಂದ ತತ್ತರಿಸುವಂತಾಗಿದೆ.ಈ ಘಟನೆಗೆ ಸಂಬಂಸಿದಂತೆ ವಾಹನಗಳ ಮಾಲೀಕರು ಪೊಲೀಸರಿಗೆ ದೂರು ನೀಡಲು ತೆರಳಿದಾಗ, ದೂರ ಸ್ವೀಕರಿಸದೆ ಸ್ಥಳಕ್ಕಾಗಮಿಸಿ ಬೀಟ್ ವ್ಯವಸ್ಥೆಯನ್ನು ಸುಧಾರಿಸುವ ಭರವಸೆಯನ್ನು ನೀಡಿದ್ದು, ಪೊಲೀಸರ ಈ ನಡೆ ಬಗ್ಗೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಎರಡು ಬಾರಿ ಪೆಟ್ರೋಲ್ ಕಳವು ಘಟನೆಗಳು ನಡೆಯುತ್ತಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Facebook Comments