ಟ್ಯಾಂಕರ್ ಪಲ್ಟಿ, ಅಪಾರ ಪ್ರಮಾಣದ ಪೆಟ್ರೋಲ್ ಮಣ್ಣುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

tankarಅಥಣಿ,ಡಿ.25- ಪೆಟ್ರೋಲ್ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ಟ್ಯಾಂಕರ್‍ನಲ್ಲಿದ್ದ ಅಪಾರ ಪ್ರಮಾಣದ ಪೆಟ್ರೋಲ್ ರಸ್ತೆ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಹರಿದಿದ್ದು ಭಾರೀ ಅನಾಹುತವೊಂದು ತಪ್ಪಿದೆ. ಅಥಣಿಯಿಂದ ಗೋಕಾಕ್ ರಸ್ತೆ ಮೂಲಕ ಪೆಟ್ರೋಲ್ ಟ್ಯಾಂಕರ್ ಬೆಂಗಳೂರಿನತ್ತ ಹೊರಟಿತ್ತು. ತಾಲೂಕಿನ ಹೆಲ್ಯಾಳ ಗ್ರಾಮದಲ್ಲಿ ಮಧ್ಯರಾತ್ರಿ 12.30ರ ವೇಳೆಗೆ ಟ್ಯಾಂಕರ್ ಪಲ್ಟಿಯಾಗಿದೆ.

ಈ ಸಂದರ್ಭದಲ್ಲಿ ಟ್ಯಾಂಕರ್‍ನಲ್ಲಿದ್ದ ಪೆಟ್ರೋಲ್ ರಸ್ತೆ ಪಕ್ಕದ ಶಶಿಧರ ರಾಮಪ್ಪ ಭಜಂತ್ರಿ ಅವರ ಮನೆಗೆ ನುಗ್ಗಿದ್ದು, ಪೊರಕೆಗಳು ನಾಶವಾಗಿವೆ. ಟ್ಯಾಂಕರ್ ರಾಮಪ್ಪ ಭಜಂತ್ರಿ ಅವರ ಮನೆಗೆ ಡಿಕ್ಕಿ ಹೊಡೆದಿದ್ದು ಗೋಡೆಗೆ ಹಾನಿಯಾಗಿದೆ. ರಾತ್ರೋ ರಾತ್ರಿ ಜನ ಪೆಟ್ರೋಲ್ ತುಂಬಿಕೊಂಡು ಹೋಗಲು ಮುಗಿಬಿದ್ದಿದ್ದರು.
ಸ್ಥಳಕ್ಕೆ ಉಪ ತಹಶೀಲ್ದಾರ್ ರಾಜು ಬುರ್ಲಿ ಹಾಗೂ ಸಿಪಿಐ ಎಚ್.ಶೇಖರಪ್ಪ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಾರೆ.

ಟ್ಯಾಂಕರ್ ಪಲ್ಟಿಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ