ದ್ವೀಪ ರಾಷ್ಟ್ರ ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ..!

ಈ ಸುದ್ದಿಯನ್ನು ಶೇರ್ ಮಾಡಿ

ಮನಿಲಾ, ಸೆ.11- ದ್ವೀಪ ರಾಷ್ಟ್ರ ಫಿಲಿಪೈನ್ಸ್‍ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ. ಮೂಲಗಳ ಪ್ರಕಾರ ಫಿಲಿಫೈನ್ಸ್‍ನ ಸರಂಗನಿ ಪ್ರಾಂತ್ಯದಲ್ಲಿ ಈ ಭೂಕಂಪನ ಸಂಭವಿಸಿದ್ದು, 3 ವರ್ಷಗಳಿಂದೀಚೆಗೆ ಇಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ಅಮೆರಿಕದ ಭೂಕಂಪನ ಮಾಪನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಕಾಲಮಾನ ರಾತ್ರಿ 11.32ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು, ಭೂಕಂಪನ ಸಂಭವಿಸಿರುವ ಸರಂಗನಿ ಪ್ರಾಂತ್ಯ ಭೂಕಂಪನ ಮತ್ತು ಲಾವಾ ರಸ ಚಟುವಟಿಕೆಯಿಂದ ಕೂಡಿರುವ ರಿಂಗ್ ಫೈರ್ ಪ್ರದೇಶದಲ್ಲಿದೆ. ಭೂಮಿ ಕಂಪಿಸುವುದು ಸಾಮಾನ್ಯವೇ ಆದರೆ ಈ ಬಾರಿ ಕೊಂಚ ಹೆಚ್ಚಿನ ಪ್ರಮಾಣದ ಭೂಮಿ ಕಂಪಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಇದೇ ಫೆಸಿಫಿಕ್ ಸಾಗರದಲ್ಲಿ ಲಾವಾ ರಸ ಉಕ್ಕಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

Facebook Comments