Wednesday, April 24, 2024
Homeರಾಷ್ಟ್ರೀಯತೆಲಂಗಾಣದಲ್ಲಿ ಫೋನ್ ಕದ್ದಾಲಿಕೆ ಸದ್ದು

ತೆಲಂಗಾಣದಲ್ಲಿ ಫೋನ್ ಕದ್ದಾಲಿಕೆ ಸದ್ದು

ಹೈದರಾಬಾದ್,ಮಾ.26- ತೆಲಂಗಾಣದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ವರದಿಯಾಗಿದೆ. ರಾಜ್ಯದ ಕೆಲ ಪೊಲೀಸರು ಹಿಂದಿನ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಅಣತಿ ಮೇರೆಗೆ ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಹಲವಾರು ಪ್ರತಿಪಕ್ಷಗಳ ನಾಯಕರ ಫೋನ್ ಕದ್ದಾಲಿಕೆ ನಡೆಸಿದ್ದರು ಎಂದು ತಿಳಿದುಬಂದಿದೆ. ಇದರ ಜೊತೆಗೆ ಬಿಆರ್‍ಎಸ್ ಪಕ್ಷದ ನಿಧಿಗೆ ಬೃಹತ್ ಮೊತ್ತದ ಕೊಡುಗೆ ನೀಡುವಂತೆ ಉದ್ಯಮಿಗಳನ್ನು ಬ್ಲ್ಯಾಕ್‍ಮೇಲ್ ಮಾಡಲು ಸಹ ಕಣ್ಗಾವಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳಿಗೆ ಬಿಆರ್‍ಎಸ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಈ ಸಂಬಂಧ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಇದೀಗ ಅಮೆರಿಕದಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ ರಾವ್ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭುಜಂಗ ರಾವ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿರುಪತಣ್ಣ ಅವರುಗಳು ಅಕ್ರಮ ಕಣ್ಗಾವಲು ಮತ್ತು ಸಾಕ್ಷ್ಯ ನಾಶವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿನ ಬಿಆರ್‍ಎಸ್ ಸರ್ಕಾರದ ಅಡಿಯಲ್ಲಿ ರಾಜ್ಯ ಗುಪ್ತಚರ ಬ್ಯೂರೋದ ತಾಂತ್ರಿಕ ಸಲಹೆಗಾರ ರವಿ ಪಾಲ್ ಅವರು, ರೆಡ್ಡಿ ಅವರ ಸಂಭಾಷಣೆಗಳನ್ನು ಕೇಳಲು ಅವರ ನಿವಾಸದ ಬಳಿ -ಫೋನ್ ಟ್ಯಾಪಿಂಗ್ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಮತ್ತು ಸ್ಥಾಪಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಾಫ್ಟ್ ವೇರ್ ಕಂಪನಿಯನ್ನು ಮುಂಭಾಗವಾಗಿ ಬಳಸಿಕೊಂಡು ಇಸ್ರೇಲ್‍ನಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಂತಹ ಆಮದುಗಳಿಗೆ ಕೇಂದ್ರದಿಂದ ಯಾವುದೇ ಅನುಮತಿಯನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ. ಈ ಸೆಟಪ್‍ನೊಂದಿಗೆ, 300 ಮೀಟರ್ ವ್ಯಾಪ್ತಿಯಲ್ಲಿ ಮಾತನಾಡುವ ಯಾವುದನ್ನಾದರೂ ಕೇಳಬಹುದು ಎಂದು ವರದಿಗಳು ಹೇಳುತ್ತವೆ.

ರವಿ ಪಾಲ್ ಅವರು ರೆಡ್ಡಿ ನಿವಾಸದ ಬಳಿ ಕಚೇರಿಯನ್ನು ಸ್ಥಾಪಿಸಿ ಸಾಧನವನ್ನು ಅಳವಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆತನನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.ತೆಲುಗು ಟಿವಿ ಚಾನೆಲ್ ಐ ನ್ಯೂಸ್ ನಡೆಸುತ್ತಿರುವ ಶರ್ವಣ್ ರಾವ್ ಮತ್ತು ಸಿಟಿ ಟಾಸ್ಕ್ -ಫೋರ್ಸ್ ನ ಪೊಲೀಸ್ ಅಧಿಕಾರಿ ರಾಧಾ ಕಿಶನ್ ರಾವ್ ಅವರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಕಣ್ಗಾವಲು ವಿರೋಧ ಪಕ್ಷದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ರಿಯಲ್ ಎಸ್ಟೇಟ್ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳು ಸೇರಿದಂತೆ ಪ್ರಮುಖ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಮೇಲೂ ನಿಗಾ ಇರಿಸಲಾಗಿತ್ತು. ವಾಸ್ತವವಾಗಿ, -ಫೋನ್ ಸಂಭಾಷಣೆಗಳ ಕದ್ದಾಲಿಕೆಯು ಸೆಲೆಬ್ರಿಟಿ ದಂಪತಿಗಳ ವಿಚ್ಛೇದನಕ್ಕೆ ಕಾರಣವಾಗಿತ್ತು ಎಂದು ವರದಿಗಳು ಹೇಳುತ್ತವೆ.

RELATED ARTICLES

Latest News