ಫೋಟೊ ಸೆಷನ್‍ನಲ್ಲಿ ಬಿಬಿಎಂಪಿ ಸದಸ್ಯರು ತಲ್ಲೀನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9- ನಿನ್ನೆ ರಾತ್ರಿ ದಿಢೀರ್ ಸುರಿದ ಮಳೆಗೆ ಅರ್ಧ ಬೆಂಗಳೂರು ಮುಳುಗಿದೆ. ಜನ ತತ್ತರಿಸಿ ಹೋಗಿದ್ದಾರೆ. ಸಾರ್ವಜನಿಕರ ಸಮಸ್ಯೆ ಆಲಿಸಬೇಕಾದ ಬಿಬಿಎಂಪಿ ಸದಸ್ಯರು ಫೋಟೊ ಸೆಷನ್‍ನಲ್ಲಿ ನಿರತರಾಗಿದ್ದಾರೆ.  ನಾಳೆಗೆ ಪಾಲಿಕೆ ಸದಸ್ಯರ ಐದು ವರ್ಷದ ಅವಧಿ ಪೂರ್ಣವಾಗಲಿದೆ. ಹಾಗಾಗಿ ನಗರದಲ್ಲಿ ಏನಾದರೂ ಏನು ಎಂಬ ಉದಾಸೀನ ಅವರಲ್ಲಿ ಎದ್ದು ಕಾಣುತ್ತಿದೆ.

ಇದರಿಂದಾಗಿಯೇನೊ ಇಂದು ಪಾಲಿಕೆಯ ಕೊನೆಯ ಸಭೆ ನಡೆಯುತ್ತಿದ್ದರೂ ಸದಸ್ಯರು ಮಾತ್ರ ತಮ್ಮ ತಮ್ಮ ಸ್ಥಾಯಿ ಸಮಿತಿಗಳ ಅಧ್ಯಕ್ಷರೊಂದಿಗೆ ಫೋಟೊ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದರು.

ಮತ್ತೆ ಕೆಲವರು ಮೇಯರ್, ಉಪಮೇಯರ್ ಮತ್ತು ಅಧಿಕಾರಿಗಳೊಂದಿಗೆ ಫೋಟೊ ತೆಗೆಸಿಕೊಳ್ಳುವುದರಲ್ಲಿ ತನ್ಮಯರಾಗಿದ್ದರು. ಪಾಲಿಕೆ ಸದಸ್ಯರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇಡೀ ರಾತ್ರಿ ಮಳೆ ಬಂದು ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ಯಾವ ಸದಸ್ಯರಿಗೂ, ಅಧಿಕಾರಿಗಳಿಗೂ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಜನ ಎಚ್ಚರಿಸಿದ್ದಾರೆ.

Facebook Comments