BEMLಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಸೆ.2- ಪಿನಾಕ ಯೋಜನೆಗಾಗಿ 330 ಹೈ ಮೊಬಿಲಿಟಿ ವಾಹನಗಳನ್ನು ಪೂರೈಸಲು ಪ್ರಮುಖ ರಕ್ಷಣಾ ವಲಯದ ಸಾಧನ ತಯಾರಿಕಾ ಸಂಸ್ಥೆ ಬಿಇಎಂಎಲ್ ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ ದೊರೆತಿದೆ.

ಪಿನಾಕ, ಬಹು-ಬ್ಯಾರೆಲ್ ರಾಕೆಟ್ ಉಡಾವಣಾ ವಾಹಕವಾಗಿದ್ದು, ಇದನ್ನು ಭಾರತೀಯ ಸೇನೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ರಕ್ಷಣಾ ಉದ್ಯಮಗಳನ್ನೊಳಗೊಂಡಂತೆ ಭಾರತದಲ್ಲೇ ಪಿನಾಕವನ್ನು ನಿರ್ಮಿಸಲಾಗುತ್ತಿದೆ. ಬಹು-ಬ್ಯಾರೆಲ್ ಉಡಾವಣಾ ವ್ಯವಸ್ಥೆಯನ್ನು ತುಂಬಾ ಗಟ್ಟಿಮುಟ್ಟಾದ ಬಿಇಎಂಎಲ್ ಟ್ರಕ್‍ನಲ್ಲಿ ಇರಿಸಲಾಗಿದೆ.

ಈ ಟ್ರಕ್, ರಸ್ತೆಯಲ್ಲದೆ ಎಂತಹುದೇ ದುರ್ಗಮ ಜಾಗಗಳಲ್ಲೂ ಚಲಿಸುವುದರಿಂದ ಪ್ರಶಂಸೆಗೆ ಪಾತ್ರವಾಗಿದೆ. ಯುದ್ಧಭೂಮಿಯಲ್ಲಿ ಭಾರತೀಯ ಸೇನೆಗೆ ತುಂಬಾ ನೆರವಾಗುತ್ತಿದೆ.

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಹೈ ಮೊಬಿಲಿಟಿ ವಾಹನಗಳ ತಯಾರಿಕೆಯಲ್ಲಿ ತೊಡಗಿರುವ ಬಿಇಎಂಎಲ್ಗೆ ಹೊಸ ಗುತ್ತಿದೆ ದೊಡ್ಡ ಉತ್ತೇಜನವಾಗಿದೆ. ಈ ಮೂಲಕ ಆತ್ಮನಿರ್ಭರ್ ಭಾರತ್‍ನಡಿ ಬಿಇಎಂಎಲ್ ಪ್ರಯತ್ನಗಳನ್ನು ಬಿಂಬಿಸಲಾಗುತ್ತಿದೆ.

ಹೈ ಮೊಬಿಲಿಟಿ ವಾಹನಗಳನ್ನು ಬಿಇಎಂಎಲ್ ತನ್ನ ಕೇರಳದ ಪಾಲಕ್ಕಾಡ್ ಸ್ಥಾವರದಲ್ಲಿ ಉತ್ಪಾದಿಸಲಿದ್ದು, 3 ವರ್ಷಗಳ ಅವಧಿಯಲ್ಲಿ ಎಲ್ಲ 330 ವಾಹನಗಳನ್ನು ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಿದೆ.

Facebook Comments