ಲೋಕಸಭೆಗೆ ಸ್ಪರ್ಧಿಸಿರುವ ಪಿನಾಕಿ ಮಿಶ್ರಾ ಅತ್ಯಂತ ಶ್ರೀಮಂತ ಅಭ್ಯರ್ಥಿ..!

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್, ಏ.22- ಮೂರನೇ ಹಂತದ ಲೋಕಸಭೆ ಚುನಾವಣೆ ಯಲ್ಲಿ ಒಡಿಸ್ಸಾದ ಬಿಜೆಪಿ ಅಭ್ಯರ್ಥಿ ಪಿನಾಕಿ ಮಿಶ್ರಾ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಬಿಂಬಿಸಿಕೊಂಡಿದ್ದಾರೆ.

ಒಡಿಸ್ಸಾದ ಲೋಕಸಭಾ ಚುನಾವಣೆಯಲ್ಲಿ 61 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದು, ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪಿನಾಕಿ ಮಿಶ್ರಾ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು 117 ಕೋಟಿ ಎಂದು ಬಿಂಬಿಸಿಕೊಂಡಿದ್ದಾರೆ.

ಪಿನಾಕಿ ನಂತರ ಸಾಮ್‍ಬಾಲ್‍ಪುರ ಬಿಜೆಪಿ ಅಭ್ಯರ್ಥಿ ನಿತೀಶ್ ಗಂಗ್ ದಿಬೆ (26 ಕೋಟಿ ರೂ.), ದೇನ್‍ಕನಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಸಿಂಗ್‍ಡಿಯೋ (15 ಕೋಟಿ ರೂ.) ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

61 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 15 ಅಭ್ಯರ್ಥಿಗಳ ಮೇಲೆ ಗುರುತರ ಅಪರಾಧ ಪ್ರಕರಣಗಳಲ್ಲಿ ದಾಖಲಾಗಿದ್ದಾರೆ ಎಂದು ನಾಮಪತ್ರ ಸಲ್ಲಿಸುವ ವೇಳೆ ಘೋಷಿಸಿಕೊಂಡಿ ದ್ದಾರೆ.

ಒಡಿಸ್ಸಾದಲ್ಲಿ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಕಟಕ್‍ನ ಬಾರಾಂಬಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಾಬಾ ಮೊಹಂತಿ ತಮ್ಮ ಆಸ್ತಿ ಮೌಲ್ಯವನ್ನು 106 ಕೋಟಿ ಎಂದು ಘೋಷಿಸಿಕೊಂಡಿದ್ದರೆ, ಗಾಸಿಯಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಒಪಿಸಿಸಿ ಅಧ್ಯಕ್ಷ ನಿರಂಜನ ಪಟ್ನಾಯಕ್ (60 ಕೋಟಿ ರೂ.), ಚಾಪುಂವಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ (46 ಕೋಟಿ ರೂ.) ನಂತರದ ಸ್ಥಾನದಲ್ಲಿದ್ದಾರೆ.

ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ 356 ಅಭ್ಯರ್ಥಿಗಳ ಪೈಕಿ 119 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. 101 ಅಭ್ಯರ್ಥಿಗಳು ದೊಡ್ಡ ಮಟ್ಟದ ಕ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.6 ಲೋಕಸಭಾ ಕ್ಷೇತ್ರದಲ್ಲಿ 6 ಮಹಿಳಾ ಅಭ್ಯರ್ಥಿಗಳು ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ 38 ಮಂದಿ ಮಹಿಳೆ ಯರು ಸ್ಪರ್ಧಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin