ಮೈಸೂರಲ್ಲಿ ಮಹಿಳೆಯರಿಗಾಗಿ ಪಿಂಕ್ ಪೆಟ್ರೋಲ್ ಬಂಕ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ. 10- ರಾಜ್ಯದಲ್ಲಿ ಇದೇ ಪ್ರಥಮವೆನಿಸಿದ ವಿನೂತನ ಮಾದರಿಯ ಪಿಂಕ್ ಪೆಟ್ರೋಲ್ ಬಂಕ್‍ನ್ನು ಸಾಂಸ್ಕøತಿಕ ನಗರಿಯಲ್ಲಿ ಆರಂಭಿಸುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ.

ನಗರದ ಬೋಗಾದಿ ರಸ್ತೆಯಲ್ಲಿ ಈ ಪೆಟ್ರೋಲ್ ಬಂಕ್ ಕಾರ್ಯ ಆರಂಭಿಸಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ.

ಸಾಮಾನ್ಯವಾಗಿ ಎಲ್ಲ ಪೆಟ್ರೋಲ್ ಬಂಕ್‍ಗಳಲ್ಲಿ ಪುರಷರು, ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಪಿಂಕ್ ಪೆಟ್ರೋಲ್ ಬಂಕ್‍ನಲ್ಲಿ ಮಹಿಳೆಯರಿಗೆ ಮಾತ್ರ ಪೆಟ್ರೋಲ್ ಹಾಕಿಸಿಕೊಳ್ಳಲು ಅವಕಾಶವಿದ್ದು, ಇಲ್ಲಿ ಪೆಟ್ರೋಲ್ ಹಾಕುವವರೂ ಸಹ ಮಹಿಳೆಯರೇ ಎಂಬುದು ಮತ್ತೊಂದು ವಿಶೇಷ.

ಪಿಂಕ್ ಮತಗಟ್ಟೆ ಮೂಲಕ ಮತದಾನಕ್ಕೆ ಮಹಿಳೆಯರನ್ನು ಪ್ರೋತ್ಸಾಹಿಸಿದ ಮಾದರಿಯಲ್ಲೇ ಪಿಂಕ್ ಪೆಟ್ರೋಲ್ ಬಂಕ್‍ನ್ನು ಆರಂಭಿಸಿದ್ದು, ಮಹಿಳೆಯರು ಕಾಯುವಂತಹ ಕಿರಿಕಿರಿ ತಪ್ಪಿಸಲು ಬೇಗ ಪೆಟ್ರೋಲ್ ಹಾಕಿಸಿಕೊಂಡು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡಿ ಇಟ್ಟು ಸಾಗುತ್ತಿರುವ ಮಹಿಳೆಯರಿಗೆ ಒಂದಿಷ್ಟು ನೆರವು ಹಾಗೂ ಪ್ರೋತ್ಸಾಹದ ನಿಟ್ಟಿನಲ್ಲಿ ಅವರಿಗಾಗಿ ಮಾಡುವ ಪ್ರತ್ಯೇಕ ವ್ಯವಸ್ಥೆ ಹೆಚ್ಚು ಉಪಯುಕ್ತವೆನಿಸಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin