ತೆರೆದಿದ್ದ ಕೊಳವೆಬಾವಿ ಪೈಪ್ ಮುಚ್ಚಿದ ನಗರಸಭೆ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಏ.8- ನಗರದ ಬೈಪಾಸ್ ರಸ್ತೆ ಬದಿಯಲ್ಲಿ ವಿಫಲವಾಗಿರುವ ಕೊಳವೆಬಾವಿ ಕೇಸಿಂಗ್ ಪೈಪ್ ಮುಚ್ಚದೆ ಹಾಗೇ ಬಿಟ್ಟಿದ್ದ ಕುರಿತು ತೆರೆದ ಕೊಳವೆಬಾವಿ, ಆತಂಕದಲ್ಲಿ ಜನತೆ ಎಂಬ ಶೀರ್ಷಿಕೆಯಡಿಯಲ್ಲಿ ಏ.6 ರಂದು ಈ ಸಂಜೆ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಿತ್ತು, ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ತೆರೆದ ಕೊಳವೆಬಾವಿಯ ಸ್ಥಳಕ್ಕೆ ಬೇಟಿ ನೀಡಿ ಅದನ್ನು ಮುಚ್ಚುವ ಕೆಲಸವನ್ನು ಮಾಡಿದರು.

ತೆರೆದ ಕೊಳವೆಬಾವಿ ಸುದ್ದಿ ಮಾಡಿದ್ದರಿಂದ ನಗರಸಭೆಯವರು ಎಚ್ಚೆತ್ತುಕೊಂಡು ಕೊಳವೆಬಾವಿಯನ್ನು ಮುಚ್ಚುವ ಕೆಲಸವನ್ನು ಮಾಡಿದ್ದಾರೆ ಇದರಿಂದ ಸಾರ್ವಜನಿಕರು ನಿಟ್ಟುಸಿರುಬಿಟ್ಟಿದ್ದಾರೆ.

ನಗರಸಭೆ ಅಧ್ಯಕ್ಷೆ ಗಾಯಿತ್ರಿಬಸವರಾಜು ಮಾತನಾಡಿ, ವಿಫಲವಾಗಿರುವ ಕೊಳವೆಬಾವಿಯನ್ನು ಮುಚ್ಚುವುದನ್ನು ಮರೆತಿದ್ದಾರೆ, ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಕೊಳವೆಬಾವಿ ಪೈಪ್‍ನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ, ಯಾವುದೇ ಸ್ಥಳದಲ್ಲಿ ಕೊಳವೆಬಾವಿಗಳು ವಿಫಲವಾದಲ್ಲಿ ತಕ್ಷಣವೇ ಅದಕ್ಕೆ ಮುಚ್ಚಳವನ್ನು ಹಾಕಿ ಮುಚ್ಚುವಂತೆ ಈಗಾಗಲೇ ಸಂಬಂಧಪಟ್ಟವರಿಗೆ ಆದೇಶ ಮಾಡಲಾಗಿತ್ತು, ಇನ್ನು ಮುಂದೆ ಇಂತಹ ಪ್ರಕರಣ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Facebook Comments