ಯಾವುದೇ ರೀತಿಯಲ್ಲಿ ರೈಲ್ವೆ ಖಾಸಗೀಕರಣ ಇಲ್ಲ : ಪಿಯೂಷ್ ಗೋಯಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ರೈಲ್ವೆ ಯಾವುದೇ ರೀತಿಯಲ್ಲಿ ಖಾಸಗೀಕರಣಗೊಳ್ಳುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ರೈಲ್ವೆ ಖಾಸಗೀಕರಣಗೊಳ್ಳಲಿದೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿರುವ ಅವರು, ಖಾಸಗಿ ಪ್ಲೇಯರ್ ಸಹಾಯದಿಂದ 109 ಮಾರ್ಗಗಳಲ್ಲಿ 151 ಆಧುನಿಕ ರೈಲುಗಳನ್ನು ಓಡಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಈ ನಿರ್ಧಾರದಿಂದ ಖಾಸಗೀಕರಣದ ಚರ್ಚೆಗಳು ಜೋರಾಗಿದೆ ಮತ್ತು ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರೈಲ್ವೆಯನ್ನು ಯಾವುದೇ ರೀತಿ ಖಾಸಗೀಕರಣಗೊಳಿಸುವುದಿಲ್ಲ.

ದೇಶದಲ್ಲಿ ಖಾಸಗಿ ರೈಲು ಚಲಿಸುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ ಮತ್ತು ಉದ್ಯೋಗಾವಕಾಶ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಈ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸುವ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ.

ಪ್ರೈವೇಟ್ ಫ್ಲೈ ಓವರ್‍ಗಳ ಅನುಮೋದನೆಯಿಂದ ರೈಲ್ವೆ ಸೇವೆಯನ್ನು ಸುಧಾರಿಸುತ್ತದೆಯೇ ಹೊರತು ಯಾವುದೇ ರೀತಿಯಲ್ಲಿ ರೈಲ್ವೆ ಖಾಸಗೀಕರಣಗೊಳ್ಳುತ್ತಿಲ್ಲ. ರೈಲ್ವೆಯ ಎಲ್ಲಾ ಸೇವೆಗಳು ಸಾಮಾನ್ಯವಾಗಿಯೇ ಮುಂದುವರೆಯಲಿವೆ. ಆಧುನಿಕ ಸೌಲಭ್ಯವನ್ನು ಹೊಂದಿರುವ 151 ಹೊಸ ರೈಲುಗಳನ್ನು ಓಡಿಸಲಾಗುವುದು.

ಕೆಲವು ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಕಂಪೆನಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಖಾಸಗಿ ವಲಯದಿಂದ ಸುಮಾರು 30 ಸಾವಿರ ಕೋಟಿ ರೂ. ರೈಲ್ವೆ ಜಾಲದಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆಗೆ ಇದು ಮೊದಲ ಹೆಜ್ಜೆಯಾಗಿದೆ. ಕಳೆದ ಸಾಲಿನಲ್ಲಿ ಐಆರ್‍ಟಿಸಿ, ಲಕ್ನೋ-ದೆಹಲಿ ತೇಜಸ್ ಎಕ್ಸ್‍ಪ್ರೆಸ್ ಖಾಸಗಿ ರೈಲು ಪ್ರಾರಂಭಿಸಿತ್ತು.

ವಾರಣಾಸಿ, ಇಂದೋರ್ ಮಾರ್ಗದಲ್ಲಿ ಕಾಶಿ-ಮಹಕಲ್ ಎಕ್ಸ್‍ಪ್ರೆಸ್, ಲಕ್ನೋ-ನವದೆಹಲಿ ತೇಜಸ್ ಮತ್ತು ಅಹಮದಾಬಾದ್-ಮುಂಬೈ ತೇಜಸ್ ಎಕ್ಸ್‍ಪ್ರೆಸ್ ಸಂಚರಿಸುತ್ತಿದೆ ಎಂದು ತಿಳಿಸಿದ್ದಾರೆ.

Facebook Comments