ಅಮೆರಿಕದ ಡಕೋಟಾ ರಾಜ್ಯದಲ್ಲಿ ಲಘು ವಿಮಾನ ಪತನ, 9 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಡಿ.1-ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದಲ್ಲಿ ಲಘು ವಿಮಾನವೊಂದು ಪತನಗೊಂಡು ಇಬ್ಬರು ಮಕ್ಕಳೂ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟು, ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ.

ಭಾರೀ ಬಿರುಗಾಳಿಯ ಮುನ್ನೆಚ್ಚರಿಕೆ ನಡುವೆಯೂ ಏರ್‍ಫೋರ್ಟ್‍ನಿಂದ ಮೇಲೇರಿದ ಕೆಲವು ನಿಮಿಷಗಳಲ್ಲೇ ಏಕ ಎಂಜಿನ್‍ನ ಪಿಲಾಟಸ್ ಪಿಸಿ-12 ಟಬೋ ಪ್ರೊಪೆಲರ್ ವಿಮಾನ ಪತನಗೊಂಡಿತು ಎಂದು ವಿಮಾನಯಾನ ಆಡಳಿತ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೇಂಬರ್‍ಲೈನ್ ಏರ್‍ಫೆಫೋರ್ಟ್‍ನಿಂದ ಒಂದು ಮೈಲಿ ದೂರದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಮೃತರಲ್ಲಿ ವಿಮಾನದ ಪೈಲೆಟ್ ಮತ್ತು ಇಬ್ಬರು ಮಕ್ಕಳೂ ಸಹ ಸೇರಿದ್ದಾರೆ ಎಂದು ಬ್ರುಲೆ ಕೌಂಟ್ ರಾಜ್ಯದ ಅಟಾರ್ನಿ ಥೆರೇಸಾ ಮಲ್ ರೋಸೊವ್ ತಿಳಿಸಿದ್ದಾರೆ.  ಈ ವಿಮಾನದಲ್ಲಿ 12 ಮಂದಿ ಇದ್ದರು. ಗಾಯಗೊಂಡ ಮೂವರಿಗೆ ಸಿಯೋಕ್ಸ್ ಪಾಲ್ಸ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದುರ್ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments