ಹಿಮಾಲಯ ತಪ್ಪಲಿನಲ್ಲಿ ‘ಚೋಟಾ ಕೈಲಾಸ’ ಅಭಿವೃದ್ಧಿಗೆ ಭಾರತ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ಪಿತೋರ್‍ಗಢ, ಫೆ.26 (ಪಿಟಿಐ)- ಈ ವರ್ಷ ಕೈಲಾಸ- ಮಾನಸ ಸರೋವರ ಯಾತ್ರೆ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವುದರಿಂದ ಉತ್ತರಖಂಡದ ಕುಮಾವೂನ್ ಮಂಡಲ್ ವಿಕಾಸ್ ನಿಗಮ್ (ಕೆಎಂವಿಎನ್) ಚೀನಾ ಗಡಿಯ ಭಾರತೀಯ ಭಾಗದ ಹಿಮಾಲಯ ತಪ್ಪಲಿನಲ್ಲಿರುವ ಸಾಕ್ಷಾತ್ ಶಿವನ ಮೂಲ ವಾಸಸ್ಥಾನವಾದ ‘ಚೋಟಾ ಕೈಲಾಸ’ವನ್ನು ಪ್ರಮುಖ ತೀರ್ಥಯಾತ್ರೆಯ ತಾಣವಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಿದೆ.

ಚೋಟಾ ಕೈಲಾಸವನ್ನು ಆದಿ ಕೈಲಾಸ ಎಂತಲೂ ಗುರುತಿಸಲಾಗಿದ್ದು, ಹಿಮಾಲಯ ತಪ್ಪಲಿನಲ್ಲಿ ಸಾಕ್ಷಾತ್ ಶಿವನ ಮೂಲ ವಾಸಸ್ಥಾನ ಎಂದೂ ಪರಿಗಣಿಸಲಾಗಿದೆ. ದೇಶಾದ್ಯಂತ ಶಿವಭಕ್ತರು ಭೇಟಿ ನೀಡುವ ಅತ್ಯುತ್ತಮ ಯಾತ್ರಾ ಸ್ಥಳವಾಗಿದೆ ಎಂದು ಕೆಎಂವಿಎನ್ ಅಧ್ಯಕ್ಷ ಕೇದಾರ ಜೋಶಿ ತಿಳಿಸಿದರು.

ಕಳೆದ ವರ್ಷ ಜೂನ್‍ನಲ್ಲಿ ಬಿಆರ್‍ಒ ವ್ಯಾಸ್ ಕಣಿವೆಯನ್ನು ಮೋಟಾರ್ ರಸ್ತೆಯೊಂದಿಗೆ ಸಂಪರ್ಕಿಸುವ ಮೂಲಕ ಚೋಟಾ ಕೈಲಾಸಕ್ಕೆ ಸಂಪರ್ಕ ಸುಧಾರಿಸಿದೆ. ಯಾತ್ರಾರ್ಥಿಗಳು ಈ ಸ್ಥಳವನ್ನು ತಲುಪಲು ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ವೈರಾಣು ಸಾಂಕ್ರಾಮಿಕವಾಗಿ ಹರಡಿದ್ದರಿಂದ ಕೈಲಾಸ ಮಾನಸಸರೋವರ ಯಾತ್ರೆಯ ನೋಡಲ್ ಏಜೆನ್ಸಿಯಾದ ಕೆಎಂವಿಎನ್ ರದ್ದು ಗೊಳಿಸಿತ್ತು. ಯಾತ್ರೆಯ ಬಗೆಗಿನ ತಯಾರಿಸಿದ್ಧ ಸಭೆಗಳು ನಡೆಯುವ ಸಾಧ್ಯತೆಯಿಲ್ಲ.

ಕೈಲಾಸ-ಮಾನಸ ಸರೋವರ ಯಾತ್ರಾ ಪೂರ್ವಸಿದ್ಧತಾ ಸಭೆಗಳು ಸಾಮಾನ್ಯವಾಗಿ ಫೆಬ್ರವರಿ ಮಾಸದಲ್ಲಿ ವಿದೇಶಾಂಗ ಸಚಿವಾಲಯ ನಡೆಸುತ್ತದೆ. ಆದರೂ, ನಾನು ಏಪ್ರಿಲ್ ತಿಂಗಳಲ್ಲಿ ಚೋಟಾ ಕೈಲಾಸ ಯಾತ್ರೆಯ ತೀರ್ಥಸ್ಥಳಕ್ಕೆ ಭೇಟಿ ಕೊಡುವ ಯೋಜನೆ ಹಾಕಿಕೊಂಡಿರುವುದಾಗಿ ಕೆಎಂವಿಎನ್ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ವಿಷಯ ಸಂಗ್ರಹ ಮಾಡಲಿದ್ದೇನೆ ಎಂದರು.

ಚೋಟಾ ಕೈಲಾಸವನ್ನು ಮತ್ತಷ್ಟು ಅಭಿವೃದ್ದಿಪಡಿಸುವ ಮೂಲಕ ಚಾರ್‍ಧಾಮ್ ಯಾತ್ರಾ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಅಂಕಿ ಅಂಶಗಳ ಪ್ರಕಾರ ಚೋಟಾ ಕೈಲಾಸ್‍ಗೆ ಪ್ರತಿವರ್ಷ ಒಂದು ಸಾವಿರ ತೀರ್ಥಯಾತ್ರಿಗಳು ಭೇಟಿ ಕೊಡುತ್ತಿದ್ದಾರೆ ಅದರ ಸಂಖ್ಯೆ ಹೆಚ್ಚಿಸುವ ಕಾರ್ಯ ಮಾಡಬೇಕಿದೆ.

ಆದ್ದರಿಂದ ಚೋಟಾ ಕೈಲಾಸಕ್ಕೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲು ಕೆಎಂವಿಎನ್ ಬಯಸಿದೆ. ಇದರಿಂದ ಈ ಸ್ಥಳವನ್ನು ಧಾರ್ಮಿಕ ಪ್ರವಾಸೋದ್ಯಮದ ತಾಣವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin