ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ,ಏ. 23:- ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತಿವುದನ್ನು ತಡೆಯಲು ರಾಮನಗರ ಜಿಲ್ಲಾ ವ್ಯಾಪ್ತಿಯ ಪ್ರವಾಸಿ ಸ್ಥಳಗಳು ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ.

1986ರ ಪರಿಸರ ಸಂರಕ್ಷಣೆ ಕಾಯ್ದೆ ಪ್ರಕಾರ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಬ್ಯಾಗ್, ಕ್ಯಾರಿಬ್ಯಾಗ್, ಫೋಸ್ಟರ್, ಟೇಬಲ್ ಕವರ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಥರ್ಮಾಕೋಲ್ ಬಳಸುವಂತಿಲ್ಲ. ಈ ಕಾನೂನು ಮೀರಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ನೈಸರ್ಗಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಭಕ್ತಾಧಿಗಳು ಪರಿಸರಕ್ಕೆ ಹಾನಿಯಾಗುವ ಪುನರ್ ಬಳಸಲು ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಸೂಚಿಸಿದ್ದಾರೆ.

ರಾಮನಗರ ತಾಲ್ಲೂಕಿಗೆ ಸೇರಿದ ಶ್ರೀ ರಾಮದೇವರ ಬೆಟ್ಟ, ಹಂದಿಗುದಿ ಬೆಟ್ಟ, ಯತಿರಾಜಸ್ವಾಮಿ ಬೆಟ್ಟ, ಇಬ್ಬಳಿಕೆಹಳ್ಳಿ, ಜಾನಪದ ಲೋಕ, ಪವಿತ್ರವನ, ಕೂನಗಲ್ಲು ಬೆಟ್ಟ, ಶ್ರೀ ರೇವಣ ಸಿದ್ದೇಶ್ವರ ಬೆಟ್ಟ, ವೀರಭದ್ರಸ್ವಾಮಿ ದೇವಸ್ಥಾನ, ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬೆಟ್ಟ, ಕೂಟಗಲ್ಲು ತಿಮ್ಮಪ್ಪನ ಬೆಟ್ಟ,

ಜಲಸಿದ್ದೇಶ್ವರ ದೇವಾಲಯ ಬಿಳಿಗುಂಬಾ, ಪೀರಲ್ ಷಾವಲಿ ದರ್ಗಾ, ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ವಂಡರ್‍ಲಾ, ಇನೋವೆಟಿವ್ ಫಿಲ್ಮ್ ಸಿಟಿ, ಅರ್ಕೇಶ್ವರ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ರಂಗರಾಯನ ದೊಡ್ಡಿ ಕೆರೆ ಪ್ರದೇಶ, ಬಿಳಿ ಗುಂಬಾ ಗ್ರಾ, ಪಂ. ಜಯಪುರ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ

ನರಸಿಂಹ ಗುಡ್ಡ, ಮಾಗಡಿ ತಾಲ್ಲೂಕಿಗೆ ಸೇರಿದ ಮಂಚನಬೆಲೆ ಜಲಾಶಯ, ಸಾವನ ದುರ್ಗ, ತಿರುಮಲ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ದೇವಾಲಯಗಳು ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಪ್ರವಾಸಿತಾಣಗಳು, ಜಲಾಶಯಗಳನ್ನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ.

Facebook Comments