ಟೆಸ್ಟ್ ಕ್ರಿಕೆಟ್‍ನಿಂದ ಡುಪ್ಲೆಸ್ಸಿಸ್ ನಿವೃತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಜೊಹಾನ್ಸ್‍ಬರ್ಗ್, ಫೆ.17 (ಪಿಟಿಐ)- ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಫ್. ಡುಪ್ಲೆಸ್ಸಿಸ್ ಬುಧವಾರ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿಕೊಂಡಿದ್ದಾರೆ.  ಆದರೆ, ವೃತ್ತಿಜೀವನದಲ್ಲಿ ಶಾರ್ಟರ್ ಫಾರ್ಮಾಟ್‍ನಲ್ಲಿ ಮುಂದುವರಿವ ಮೂಲಕ ಟಿ-20 ಕ್ರಿಕೆಟ್‍ಗೆ ಆದ್ಯತೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. 36 ವರ್ಷದ ಡುಪ್ಲೆಸ್ಸಿಸ್ ಅವರು ತಮ್ಮ ಇನ್‍ಸ್ಟಾ ಗ್ರಾಂ ಪೇಜ್‍ನಲ್ಲಿ ನಿವೃತ್ತಿ ಸುದ್ದಿಯನ್ನು ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 2012ರ ನವೆಂಬರ್ 23ರಂದು ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಆರಂಭಿಸಿದ್ದರು. ಇದು ಡುಪ್ಲೆಸ್ಸಿಸ್ ಅವರ ಪಾದಾರ್ಪಣೆ ಪಂದ್ಯವಾಗಿತ್ತು.

ತಮ್ಮ ನಿವೃತ್ತಿಯ ಬಗ್ಗೆ ಇದು ಬೆಂಕಿಯಲ್ಲಿ ಬೆಂದ ವರ್ಷ. ಅನಿಶ್ಚಿತ ದಿನಗಳು. ಆದರೆ ಈ ದಿನಗಳು ನನಗೆ ಹಲವು ಅಂಶಗಳಲ್ಲಿ ಸ್ಪಷ್ಟತೆಯನ್ನು ನೀಡಿದವು. ಇಂದು ನನ್ನ ಹೃದಯವು ಸ್ಪಷ್ಟವಾಗಿದೆ ಮತ್ತು ಹೊಸ ಅಧ್ಯಾಯಕ್ಕೆ ಕಾಲಿಡಲು ಸಮಯ ಸೂಕ್ತವಾಗಿದೆ ಎಂದು ಡುಪ್ಲೆಸ್ಸಿಸ್ ಫೋಸ್ಟ್ ಮಾಡಿದ್ದಾರೆ.

ಎಲ್ಲ ವಿಧಧ ಕ್ರಿಕೆಟ್‍ಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ಗೌರವ ತರುವಂತಾಹದ್ದು. ಆದರೆ, ಈಗ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಪಡೆಯುವ ಸಮಯ ಬಂದಿದೆ. ಇನ್ನೆರಡು ವರ್ಷಗಳಲ್ಲಿ ಐಸಿಸಿ ಟಿ-20 ವಿಶ್ವ ಕಪ್ ಸ್ಪರ್ಧೆಗಳಿವೆ. ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಡುಪ್ಲೆಸ್ಸಿಸ್ ಆಡಿರುವ 69 ಟೆಸ್ಟ್‍ಗಳಲ್ಲಿ ಪ್ರತಿಶತ 40.02 ರಂತೆ 4163 ರನ್ ದಾಖಲಿಸಿದ್ದಾರೆ. ಎ.ಬಿ.ಡಿವಿಲಿಯರ್ಸ್ ಅವರ ನಾಯಕತ್ವ ನಂತರ ಕೆಲಸವನ್ನು 2016ರಲ್ಲಿ ಡುಪ್ಲೆಸ್ಸಿಸ್ ವಹಿಸಿಕೊಂಡರು. ಕಳೆದ ವರ್ಷ ಟೆಸ್ಟ್ ಮತ್ತು ಟಿ-20 ನಾಯಕ ಸ್ಥಾನದಿಂದಲೂ ಕೆಳಗಿಳಿದಿದ್ದರು ಎಂದು ತಿಳಿದುಬಂದಿದೆ.

Facebook Comments