ರಂಜಾನ್ ಶುಭಾಶಯ ಕೋರುವುದರಲ್ಲೂ ರಾಜಕೀಯ ಮಾಡಿದ ಇಮ್ರಾನ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 24- ಈದ್ ಉಲ್ ಫಿರ್ತ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತನ್ನ ದೇಶದ ಮೇಲಿನ ಪ್ರಜೆಗಳಿಗಿಂತಲೂ ಕಾಶ್ಮಿರದ ಭಾರತದ ಪ್ರಜೆಗಳ ಮೇಲೆ ಹೆಚ್ಚಿನ ಪ್ರೀತಿ ಉಕ್ಕಿ ಹರಿಯುತ್ತಿದೆ.

ರಂಜಾನ್ ಸಂದರ್ಭದಲ್ಲಿ ದೇಶದ ಪ್ರಜೆಗಳಿಗೆ ಶುಭಾಷಯಗಳನ್ನು ಹೇಳುವುದಕ್ಕಿಂತಲೂ ಕಾಶ್ಮಿರವನ್ನು ಸ್ಮರಿಸಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜಗತ್ತೆ ಸಂಕಟಕ್ಕೀಡಾಗಿದೆ.

ಅದರ ನಡುವೆ ನಡೆಯುತ್ತಿರುವ ಪವಿತ್ರ ರಂಜಾನ್ ಹಬ್ಬಕ್ಕೆ ಗಣ್ಯಾತೀಗಣ್ಯರು ನಿಷ್ಕಲ್ಮಶ ಮನಸ್ಸಿನಿಂದ ಶುಭ ಹಾರೈಸಿದ್ದಾರೆ. ಆದರೆ ಇಮ್ರಾನ್ ಖಾನ್ ಅವರ ಶುಭಾಷಯದಲ್ಲಿ ರಾಜಕೀಯದ ವಾಸನೆ ಹೊಡೆಯುತ್ತಿದೆ.

ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಪಡೆಗಳ ನಿರಂತರ ಅನಾಗರಿಕತೆಯನ್ನು ಎದುರಿಸುತ್ತಿರುವ ಕಾಶ್ಮೀರದ ಜನರಿಗೆ ಈದ್ -ಉಲ್ -ಫಿರ್ತ ಸಂದರ್ಭದಲ್ಲಿ ವಿಶೇಷ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಶುಭ ಹಾರೈಸಿದ್ಧಾರೆ.

Facebook Comments

Sri Raghav

Admin