ಟ್ರಂಪ್‍ಗೆ ಅವಿಸ್ಮರಣೀಯ ಸ್ವಾಗತ ನೀಡುತ್ತೇವೆ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.12- ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವಿಸ್ಮರಣೀಯ ಸ್ವಾಗತ ನೀಡುವುದಾಗಿ ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವುದು ನಮಗೆ ಅತ್ಯಂತ ಸಂತಸ ಉಂಟು ಮಾಡಿದೆ.

ಅವರಿಗೆ ನಾವು ಅವಿಸ್ಮರಣೀಯ ಸ್ವಾಗತ ಕೋರುತ್ತೇವೆ. ಟ್ರಂಪ್ ಅವರ ಭೇಟಿಯಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ಬಲವಾಗಲಿದೆ ಎಂದು ತಿಳಿಸಿದ್ದಾರೆ. ಭಾರತ ಭೇಟಿಯನ್ನು ತಾವು ಎದುರು ನೋಡುತ್ತಿರುವುದಾಗಿ ಟ್ರಂಪ್‍ಗೆ ನೀಡಿರುವ ಹೇಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೋದಿ ಅವರ ಭಾರತ ಭೇಟಿ ಐತಿಹಾಸಿಕವಾಗಲಿದೆ. ಉಭಯದೇಶಗಳ ಸಂಬಂಧ ಸುಧಾರಣೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದರು.

ಫೆ.24 ಮತ್ತು 25ರಂದು ಟ್ರಂಪ್ ಭಾರತಕ್ಕೆ ಆಗಮಿಸಲಿದ್ದು, ದೆಹಲಿ ಮತ್ತು ಗುಜರಾತ್‍ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿತವಾಗಿದೆ. ಅಹಮದಾಬಾದ್‍ನಲ್ಲಿ ಹೌಡಿ ಮೋದಿ ರೀತಿಯ ವಿನೂತನ ಸಮಾರಂಭ ಏರ್ಪಡಿಸಲಾಗಿದೆ.

Facebook Comments