130 ಕೋಟಿ ಭಾರತೀಯರ ಸಬಲೀಕರಣಕ್ಕೆ ಬದ್ದ, ಸಂವಿಧಾನ ನಮ್ಮ ದಾರಿದೀಪ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.27-ಭಾರತದ 130 ಜನರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಸಂವಿಧಾನ ನಮಗೆ ದಾರಿ ದೀಪವಾಗಿದೆ ಎಂದು ಹೇಳಿದ್ದಾರೆ.

ಆಭಿವೃದ್ಧಿ ವಿಷಯದಲ್ಲಿ ನಮಗೆ ಯಾವುದೇ ಬೇಧಭಾವ ಇಲ್ಲ. ಜತಿ, ಧರ್ಮ, ಮತ, ಪಂಥ, ಲಿಂಗ, ನಂಬಿಕೆ, ಮತ್ತು ಭಾಷೆಗಳ ತಾರತಮ್ಯವನ್ನೂ ಮೀರಿ ನಾವು ಪ್ರಗತಿಪಥದತ್ತ ಮುನ್ನಡೆಯುತ್ತಿದ್ದೇವೆ. ಸಂವಿಧಾನವೇ ನಮಗೆ ಬೆಳಕಿನ ಮಾರ್ಗದರ್ಶನ ಎಂದು ತಿಳಿಸಿದ್ದಾರೆ.

ಕೇರಳದ ಪಥನಂತಿಟ್ಟದಲ್ಲಿ ರೆವೆರೆಂಡ್ ಜೋಸೆಫ್ ಮಾರ್ ಥೋಮಾ ಅವರ 90ನೇ ಜನ್ಮೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ದೆಹಲಿಯಿಂದ ವಿಡಿಯೋ ಕಾನ್ಪೆರನ್ಸ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ, ನಾವು ದೆಹಲಿಯಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಿಂದ ಅನುಕೂಲಕರ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಬದಲಿಗೆ ವಾಸ್ತವವಾಗಿ ಜನರಿಂದ ಲಭಿಸುವ ಸಲಹೆಗಳಿಂದ ನಾವು ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ದೇಶ ಮತ್ತು ಜನರ ಹಿತಾಸಕ್ತಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಮ್ಮದು ಜನರ ಸರ್ವತೋಮುಖ ಅಭಿವೃದ್ದಿಯ ಸರ್ಕಾರ ಎಂದು ಮೋದಿ ಹೇಳಿಕೊಂಡರು.

ಕೊರೊನಾ ವೈರಸ್ ಹಾವಳಿ ವಿರುದ್ಧ ಜನರು ನಡೆಸುತ್ತಿರುವ ಹೋರಾಟವನ್ನು ಮತ್ತೊಮ್ಮೆ ಪ್ರಶಂಸಿಸಿದ ಮೋದಿ, ನಾವು ಹೆಮ್ಮಾರಿ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮವು ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಉತ್ತಮವಾಗಿದೆ ಎಂದು ಹೇಳಿದರು.

ಕೋವಿಡ್-19 ವೈರಸ್ ಅನಾರೋಗ್ಯ ಮತ್ತು ಸಾವಿನ ಭೀತಿಯನ್ನು ಸೃಷ್ಟಿಸಿದೆ. ಅಲ್ಲದೇ ಅನಾರೋಗ್ಯ ಜೀವನಶೈಲಿಯಿಂದ ಆಗುವ ಗಂಡಾಂತರದ ಬಗ್ಗೆಯೂ ನನಗೆ ಮನವರಿಕೆ ಮಾಡಿಕೊಟ್ಟಿದೆ. ಈಗಲಾದರೂ ನಾವು ನಮ್ಮ ಲೈಫ್‍ಸ್ಟೈಲ್‍ನನ್ನು ಬದಲಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು.

ನಮ್ಮ ಜನರು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದು ನಿಲ್ಲಬಾರದು. ಈಗ ನಾವು ಇರಬೇಕು ಎಂದು ಪ್ರಧಾನಿ ಸಲಹೆ ಮಾಡಿದರು.

Facebook Comments