ಸೆ.26ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಮೋದಿ ಭಾಷಣ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ, ಸೆ.2- ಪ್ರಧಾನಿ ನರೇಂದ್ರ ಮೋದಿ ಅವರು ಸೆ.26ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಯುಎನ್‍ಎ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆ ಅಧಿವೇಶನವನ್ನು ಆಯೋಜಿಸಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶ್ವನಾಯಕರ್ಯಾರೂ ವಾರ್ಷಿಕ ಕೂಟದಲ್ಲಿ ಭೌತಿಕವಾಗಿ ಭಾಗವಹಿಸುವುದಿಲ್ಲ.

ವಿಶ್ವ ನಾಯಕರು ಅಧಿವೇಶನಕ್ಕಾಗಿ ಮೊದಲೇ ರೆಕಾರ್ಡ್ ಮಾಡಿದ ಭಾಷಣದ ವಿಡಿಯೋಗಳನ್ನು ಸಲ್ಲಿಸುತ್ತಾರೆ. ಸಾಮಾನ್ಯ ಸಭೆ ಸೆ.22 ರಿಂದ ಪ್ರಾರಂಭವಾಗಿ 29ರ ವರೆಗೆ ನಡೆಯಲಿದೆ. ಯುಎನ್‍ಎಯಲ್ಲಿ ಸಾಮಾನ್ಯ ಸಭೆ ಮತ್ತು ಸಮ್ಮೇಳನ ನಿರ್ವಹಣಾ ಇಲಾಖೆ ಇಂದು ಸಾಮಾನ್ಯ ಸಭೆಯ 75ನೆ ಅಧಿವೇಶನದ ಸ್ಪೀಕರ್‍ಗಳ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿತು.

ಈ ಪಟ್ಟಿಯ ಪ್ರಕಾರ, ಸೆ.26ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಚರ್ಚೆಯನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಈ ಪಟ್ಟಿ ತಾತ್ಕಾಲಿಕವಾಗಿದ್ದು, ಸಾಮಾನ್ಯ ಚರ್ಚೆಯ ವೇಳಾಪಟ್ಟಿಗಳು ಬದಲಾಗುವ ಸಾಧ್ಯತೆ ಇದೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಮೊದಲ ಸ್ಪೀಕರ್ ಎಂದು ಪಟ್ಟಿ ಮಾಡಲಾಗಿದೆ. ಜನರಲ್ ಡಿಬೇಟ್ ಪ್ರಾರಂಭದ ದಿನದಂದು ಯುಎಸ್ ಸಾಂಪ್ರದಾಯಿಕವಾಗಿ ಎರಡನೆ ಸ್ಪೀಕರ್ ಆಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷತೆಯ ಮೊದಲ ಅವಧಿಯ ವೈಯಕ್ತಿಕವಾಗಿ ಅಂತಿಮ ಭಾಷಣ ಮಾಡಲು ನ್ಯೂಯಾರ್ಕ್‍ಗೆ ಪ್ರಯಾಣಿಸುವ ನಿರೀಕ್ಷೆಯಿದೆ.

Facebook Comments