ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಮೋದಿ ಮಾತು, ಇಲ್ಲಿದೆ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.14-ದೇಶದ ಗಡಿಗಳ ರಕ್ಷಣೆಗೆ ನಿಂತಿರುವ ನಮ್ಮ ಯೋಧರಿಗೆ ದೇಶವು ಸ್ಥೈರ್ಯ ನೀಡುತ್ತಿದೆ ಎಂಬ ಸಂದೇಶವನ್ನು ಸಂಸತ್ ಸಾರುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಧಾನಮಂತ್ರಿ ದೇಶದ ರಕ್ಷಣಗೆ ನಿಂತಿರುವ ಯೋಧರ ಹಿಂದೆ ನಾವೆಲ್ಲರೂ ನಿಲ್ಲಬೇಕು. ಸಂಸತ್ ಕೂಡ ಇದೇ ಸಂದೇಶವನ್ನು ಸಾರುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಪೂರ್ವ ಲಡಾಖ್‍ನಲ್ಲಿ ಚೀನಾ ಜತೆ ಭುಗಿಲೆದ್ದಿರುವ ಗಡಿ ಸಂಘರ್ಷ ಕುರಿತು ಪ್ರಸ್ತಾಪಿಸಿರುವ ಪ್ರಧಾನಿ, ಅತ್ಯಂತ ದುರ್ಗಮ ಪರ್ವತ ಪ್ರದೇಶಗಳಲ್ಲಿ ನಮ್ಮ ವೀರ ಯೋಧರು ಹಿಮ ಮತ್ತು ಶೀತ ಗಾಳಿಯನ್ನು ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ ಎಂದು ಮೋದಿ ಬಣ್ಣಿಸಿದರು.

ಸಂಸತ್ ಅಧಿವೇಶನದಲ್ಲಿ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಎಲ್ಲ ಪಕ್ಷಗಳ ಸಂಸದರು ಇದರಲ್ಲಿ ಪಾಲ್ಗೊಂಡು ಅಧಿವೇಶನವನ್ನು ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ನಮ್ಮ ಎಲ್ಲ ಸಂಸದರು ಕರ್ತವ್ಯಕ್ಕೆ ಬದ್ಧರಾಗಿ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೊರೊನಾ ಹಾವಳಿ ನಿರ್ಮೂಲನೆಯಾಗುವ ತನಕ ದೇಶದ ಪ್ರತಿಯೊಬ್ಬರೂ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅವರು ಪುನರಾವರ್ತಿತ ಮನವಿ ಮಾಡಿದರು.

ಕೋವಿಡ್ ವೈರಸ್ ನಿಗ್ರಹಕ್ಕಾಗಿ ಲಿಸಿಕೆ ಇನ್ನೂ ಬಂದಿಲ್ಲ. ಅದು ಬರುವ ತನಕ ನಾವು ಯಾರೂ ಎಚ್ಚರ ತಪ್ಪಬಾರದು. ಜÁಗ್ರತೆಯಿಂದ ಇರಬೇಕೆಂದು ಅವರು ಪುನರುಚ್ಚರಿಸಿದರು.

Facebook Comments