ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುವ ಪಾಕ್-ಚೀನಾಗೆ ಚಾಣಾಕ್ಷ ಮೋದಿ ಉತ್ತರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.5- ಭಾರತೀಯ ಸಂವಿಧಾನದ ವಿಧಿ 370 ಮತ್ತು 35ಎ ಇದರಲ್ಲಿನ ಅಂಶಗಳನ್ನು ದುರುಪಯೋಗಪಡಿಸಿಕೊಂಡು ಕಣಿವೆ ರಾಜ್ಯ ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿ ಅಶಾಂತಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನ ಮತ್ತು ಚೀನಾಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಚಾಣಾಕ್ಷ ನಡೆಯಿಂದ ತಿರುಗೇಟು ನೀಡಿದ್ದಾರೆ.

ಈ ಎರಡು ವಿಧಿಗಳ ಅನ್ವಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ವಿಶ್ವಕ್ಕೆ ಸಂದೇಶ ನೀಡುವಲ್ಲಿಯೂ ಮೋದಿ ಸಫಲರಾಗಿದ್ದಾರೆ.

ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಬಹು ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿವಾದಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಪ್ರಸ್ತಾವನೆಗೂ ಇಂದಿನ ಐತಿಹಾಸಿಕ ನಿರ್ಣಯದ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ.

ಯಾವುದೇ ಆಂತರಿಕ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಲು ಭಾರತ ಸಮರ್ಥವಾಗಿದೆ. ಯಾವುದೇ ಮೂರನೆ ರಾಷ್ಟ್ರದ ಮಧ್ಯಸ್ಥಿಕೆಯ ಅಗತ್ಯವಿಲ್ಲ. ತನ್ನದೇ ಆದ ಸೂಕ್ತ ಮಾರ್ಗೋಪಾಯಗಳ ಮೂಲಕ ಗಂಭೀರ ವಿವಾದಗಳನ್ನು ಇತ್ಯರ್ಥಗೊಳಿಸಲು ಶಕ್ತವಾಗಿದೆ ಎಂಬ ಸಂದೇಶವನ್ನು ಮೋದಿ ಜಗತ್ತಿಗೆ ಸಾರಿದ್ದಾರೆ.

ಕೇಂದ್ರ ಸರ್ಕಾರದ ಇಂದಿನ ನಿರ್ಧಾರದಿಂದಾಗಿ ಪಾಕ್ ಮತ್ತು ಚೀನಾ ಕಾಶ್ಮೀರ ವಿಷಯದಲ್ಲಿ ತಲೆ ಹಾಕುವುದು ತಪ್ಪಿದಂತಾಗಿದೆ.

Facebook Comments