ಪುಲ್ವಾಮಾ ದಾಳಿ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ ಮೋದಿ-ಇಮ್ರಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಬಿಶ್‍ಕೇಕ್, ಜೂ.13- ಶಾಂಘೈ ಸಹಕಾರ ಸಂಘದ(ಎಸ್ ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಕಿರ್ಗಿಸ್ತಾನದ ರಾಜಧಾನಿ ಬಿಶ್‍ಕೇಕ್‍ಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ದೇಶದ ಪ್ರಮುಖ ನಾಯಕರು ಸ್ವಾಗತಿಸಿದರು.

ಶೃಂಗಸಭೆಯ ಹೊರಗೆ ಭಾರತ ರಷ್ಯಾ ಮತ್ತು ಚೀನಾ ಜೊತೆಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದೆ. ಶೃಂಗಸಭೆ ರಾಷ್ಟ್ರಗಳ ಮಂಡಳಿ ಮುಖ್ಯಸ್ಥರ ಜೊತೆ ಸಭೆಯಲ್ಲಿ ಭಾರತ ದೇಶಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಲಿದ್ದು ಕಿರ್ಗಿಸ್ತಾನ ಜೊತೆ ನಾಳೆ ಮಾತುಕತೆಯಾಗಲಿದೆ.

ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸುತ್ತಿದ್ದಾರೆ. ಕಳೆದ ಫೆಬ್ರವರಿ 14ರ ಪುಲ್ವಾಮಾ ದಾಳಿ ನಂತರ ಭಾರತದ ವಾಯುದಾಳಿ ನಂತರ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಪ್ರಧಾನಿ ಪರಸ್ಪರ ಭೇಟಿಯಾಗುತ್ತಿದ್ದಾರೆ.

ಆದರೆ ಇಬ್ಬರ ಮಧ್ಯೆ ಯಾವುದೇ ದ್ವಿಪಕ್ಷೀಯ ಮಾತುಕತೆಯ ಪ್ರಸ್ತಾಪವಿಲ್ಲ. ಪಾಕಿಸ್ತಾನ ಶಾಂತಿ ಮಾತುಕತೆಗೆ ಸಿದ್ದವಿದೆ ಎಂದು ಇತ್ತೀಚೆಗೆ ಇಮ್ರಾನ್ ಖಾನ್ ಪತ್ರ ಬರೆದಿದ್ದರು. ಆದರೆ ಭಾರತ ಅದಕ್ಕೆ ಒಪ್ಪಿಲ್ಲ. ಅಲ್ಲದೆ ಇತ್ತೀಚೆಗೆ ಆರಂಭದಲ್ಲಿ ಪಾಕಿಸ್ತಾನದ ವಾಯುಮಾರ್ಗವನ್ನು ಬಳಸಿ ಕಿರ್ಗಿಸ್ತಾನಕ್ಕೆ ಹೋಗಲು ಕೋರಿದ್ದ ಭಾರತ ನಂತರ ಸ್ವತಃ ತಾನಾಗಿಯೇ ಹಿಂದೆ ಸರಿದು ಪ್ರಧಾನಿ ಸುತ್ತುವರಿದ ಮಾರ್ಗವಾದ ಒಮನ್ ಮತ್ತು ಇರಾನ್‍ನ ವಾಯುಮಾರ್ಗವನ್ನು ಬಳಸಿ ತೆರಳಿದರು.

2017ರಲ್ಲಿ ಭಾರತ ಮತ್ತು ಪಾಕಿಸ್ತಾನ ಎಸ್‍ಸಿಒದ ಸಂಪೂರ್ಣ ಸದಸ್ಯತ್ವರಾಗಿದ್ದರು. 2001ರಲ್ಲಿ ಸ್ಥಾಪನೆಯಾದ ಶಾಂಘೈ ಸಹಕಾರ ಸಂಘದಲ್ಲಿ ಚೀನಾ, ಕಜಖಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸದಸ್ಯ ರಾಷ್ಟ್ರಗಳಾಗಿವೆ. ಮಾಲ್ಡಿಸ್ ಮತ್ತು ಶ್ರೀಲಂಕಾ ಭೇಟಿ ನಂತರ ಮೋದಿ ಅವರ ಮೂರನೇ ವಿದೇಶಿ ಪ್ರವಾಸ ಇದಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ